ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಅತಿಥಿ ಶಿಕ್ಷಕನ ಬಂಧನ

0
20

ಕಲಬುರಗಿ: ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅದೇ ಗ್ರಾಮದ ಶಿವರಾಜ್ ಸಗುಮಳೆ ಎಂಬ ಕಾಮುಕ ಅತಿಥಿ ಶಿಕ್ಷಕ 14 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶಿವರಾಜ್ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು.

8ನೇ ತರಗತಿ ಪರೀಕ್ಷೆ ನಿಮಿತ್ತ ವಿದ್ಯಾರ್ಥಿಯನ್ನು ಹೊಲದ ಮನೆಯಲ್ಲಿ ಬಿಟ್ಟು ತಾಯಿ ಇನ್ನುಳಿದ ಮಕ್ಕಳೊಂದಿಗೆ ಯುಗಾದಿ ಹಬ್ಬಕ್ಕೆ ತವರೂರಿಗೆ ಹೋಗಿದ್ದರು. ಈ ಕಡೆ ತಂದೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದಾಗ ವಿದ್ಯಾರ್ಥಿ ಶಾಲೆಗೆ ಹೋಗಿ ಮನೆಗೆ ಬರುವಾಗ ಅವಳನ್ನು ಹಿಂಬಾಲಿಸಿಕೊಂಡು ಬಂದು ಮನೆಯೊಳಗೆ ಯಾರೂ ಇಲ್ಲದನ್ನು ನೋಡಿದ ಕಾಮುಕ ಶಿಕ್ಷಕ ನಿನ್ನನ್ನು ತುಂಬಾ ಪ್ರೀತಿ ಮಾಡುತ್ತೇನೆ ಎಂದು ಹೇಳಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದನು.

ಕಳೆದ ಮಾ. 28 ರಂದು ಘಟನೆ ನಡೆದಿದ್ದು, ತೀವ್ರ ಅಸ್ವಸ್ಥಳಾದ ವಿದ್ಯಾರ್ಥಿಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಅವರ ತಂದೆ ಮಾ. 29 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಮಾದನ ಹಿಪ್ಪರಗಾ ಠಾಣೆಯ ಪೊಲೀಸರು ಆರೋಪಿ ಶಿವರಾಜನನ್ನು ಬಂಧಿಸಿದ್ದಾರೆ.

Previous articleನಾಗಯ್ಯಸ್ವಾಮಿ ಕುಟುಂಬವರ್ಗದರಿಗೆ ಸಚಿವ ಖರ್ಗೆ ಸಾಂತ್ವನ
Next articleಬಿಜೆಪಿಯದು ಮೋದಿ ಬೆಲೆ ಏರಿಕೆ ವಿರುದ್ಧ ಹೋರಾಟ