ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ: ಪತ್ರಕ್ಕೆ ರಕ್ತ ಮುದ್ರೆ

0
20

ಮಂಡ್ಯ: ಬಿ.ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಮಂಡ್ಯದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಮಂಡ್ಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದು. ಈ ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಮುದ್ರೆ ಒತ್ತಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ. ರಾಜ್ಯದ ನಾಯಕರ ಬೇಜವ್ದಾರಿತನದಿಂದ ಬಿಜೆಪಿ ಸೋತಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರಿಗೆ ಪಟ್ಟಕಟ್ಟಿ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸೀಟನ್ನು ಬಿಜೆಪಿ ಗೆಲ್ಲುತ್ತೆ. ಪತ್ರದಲ್ಲಿ ರಕ್ತದ ಸಹಿ ಮಾಡಿ ನಿಮಗೆ ಅರ್ಪಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Previous articleಮಣಿಪುರ ಹಿಂಸಾಚಾರ: ಸಿಎಂ ರಾಜೀನಾಮೆ ಸಾಧ್ಯತೆ
Next articleದೇಶದ ಕಾನೂನೇ ಸರಿಯಿಲ್ಲ: ಸಚಿವ ಮಂಕಾಳು ವೈದ್ಯ