ವಿಜಯಲಕ್ಷ್ಮಿ ರೀತಿ ನಾನೂ ಮದುವೆಯಾಗ್ತೀನಿ! ಬಳ್ಳಾರಿ ಜೈಲಿನ ಮುಂದೆ ಲೇಡಿ ರಂಪಾಟ

0
19

ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲ್ ನಲ್ಲಿರುವ ದರ್ಶನ್ ನೋಡಬೇಕು, ಅವರ ಜತೆ ಒಂದೆರಡು ಮಾತನಾಡಬೇಕು ಎಂದು ಮಹಿಳಾ ಅಭಿಮಾನಿಯೊಬ್ಬರು ಪಟ್ಟು ಹಿಡಿದ ಘಟನೆ ನಡೆದಿದೆ. ಬಳ್ಳಾರಿ ಕೇಂದ್ರ ಕಾರಗೃಹ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ ಮಹಿಳಾ ಅಭಿಮಾನಿಯು
ದರ್ಶನ್ ನೊಡಲೇ ಬೇಕು ಅಂತಾ ಹಠ ಹಿಡಿದರು. ಕಲಬುರಗಿ ಮೂಲದ ಬೆಂಗಳೂರಿನ ಆರ್ ಆರ್ ನಗರ ನಿವಾಸಿ ಲಕ್ಷ್ಮೀ ಎನ್ನುವ ಮಹಿಳೆ ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಗುರುವಾರ ಬೆಳಗ್ಗೆ ಆಗನಿಸಿದ್ದಾರೆ.
ಜೈಲು ಮುಂಭಾಗ ಬಂದು ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿ ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದ್ರೆ ನಾನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ ಎಂದಿದ್ದಾಳೆ.
ವಿಜಯಲಕ್ಷ್ಮಿ ತರ ನಾನೂ ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಹಣ್ಣು ಕೊಟ್ಟು ನೋಡಿ ಹೊಗುವೆ ಎಂದು ಪಟ್ಟು ಹಿಡಿದಿದ್ದ ಲಕ್ಷ್ಮಿಯನ್ನು ಕೊನೆಗೆ ಮನವೊಲಿಸಿ ವಾಪಾಸ್  ಜೈಲು ಸಿಬ್ಬಂದಿ ಕಳಿಸಿದ್ದಾರೆ.

Previous articleಶಾಲಾ ಬಸ್ ಅಪಘಾತ: ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
Next articleನಟಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌