ವಿಜಯಪುರದಲ್ಲಿ ಬೃಹತ್ ಉದ್ಯೋಗ ಮೇಳ

0
45

ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೂ ಅವಕಾಶ

ಬೆಂಗಳೂರು: ಬೆಂಗಳೂರು ಸಮೀಪದ ಬಿಡದಿಯ #ಟೊಯೊಟಾಕಿರ್ಲೋಸ್ಕರ್ ಮೋಟಾರ್ ಲಿ. ವತಿಯಿಂದ ದಿ.20 ಬುಧವಾರ ಮತ್ತು 21 ಗುರುವಾರ ದಂದು ಬೃಹತ್ ಉದ್ಯೋಗ ಮೇಳವನ್ನು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಪಾಲಿಟೆಕ್ನಿಕ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಉದ್ಯೋಗ ಮೇಳದಲ್ಲಿ ವಿಜಯಪುರ ಜಿಲ್ಲೆಯ 2023 ರಲ್ಲಿ ಡಿಪ್ಲೋಮಾ ಮತ್ತು ಐಟಿಐ ಪಾಸಾದ ಹಾಗೂ 2024ರಲ್ಲಿ ಪ್ರಸ್ತುತ ಐದನೇ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತರು ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೋಂದಾಯಿಸಲು ದಿ.19 ಮಂಗಳವಾರ ಸಂ.5ಗಂ. ವರೆಗೆ ಇರುತ್ತದೆ ಹಾಗೂ ಮೇಳದ ದಿನದಂದೆ ಸ್ಥಳದಲ್ಲಿಯೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದಿ.20 ಬುಧವಾರ ಬೆ.9.30ಗಂ. ನೋಂದಣಿ ಮಾಡಿದ ವಿದ್ಯಾರ್ಥಿಗಳ ವಿಭಾಗವಾರು ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ದಿ.21 ಗುರುವಾರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಬಯೋಡಾಟಾ ಮತ್ತು ಅಂಕಪಟ್ಟಿಗಳ ಪ್ರತಿಗಳು ಕಡ್ಡಾಯವಾಗಿ ತರಬೇಕು ಎಂದಿದ್ದಾರೆ.

ನೋಂದಣಿ ಲಿಂಕ್: https://forms.gle/EEy3dQD1wxyaJggp8.

ಮಾಹಿತಿಗಾಗಿ ಎಸ್.ವಿ.ಕುಲಕರ್ಣಿ 9449246255, ವಿ.ಎಸ್.ಮರಿಮಠ 9916853605 ಸಂಪರ್ಕಿಸಿ.

Previous articleಕಾರ್ತಿಕ ಸ್ನಾನದಿಂದ ಪಾಪ ನಿವೃತ್ತಿ ಜ್ಞಾನ ಪ್ರಾಪ್ತಿ
Next articleಮಕ್ಕಳ ಹಕ್ಕುಗಳ ಗ್ರಾಮ ಸಭೆ