ವಿಜಯಪುರ ಪಾಲಿಕೆ ಎಲ್ಲ 35 ಸದಸ್ಯರು ಅನರ್ಹ

0
42

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ 35 ಸದಸ್ಯರನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ ಬಳಿ ಕಾನೂನುಬದ್ಧವಾಗಿ ಆಸ್ತಿ ಘೋಷಣಾ ಪತ್ರ ಸಲ್ಲಿಸಿಲ್ಲ ಎಂದು ಮಾಜಿ ಸದಸ್ಯರಾದ ಪ್ರಕಾಶ ಮಿರ್ಜಿ, ಮೈನುದ್ದೀನ್ ಬೀಳಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ದೂರನ್ನು ಆಲಿಸಿದ್ದ ಹೈಕೋರ್ಟ್ ಈ ಬಗ್ಗೆ ಕ್ರಮ ಕೈಗೊಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದ್ದು, ಎಲ್ಲ 35 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಬಿಜೆಪಿಯ 17, ಕಾಂಗ್ರೆಸ್ 10, ಜೆಡಿಎಸ್ 1, ಎಂಐಎಂ 2, ಪಕ್ಷೇತರರು 5 ಸದಸ್ಯರ ಸದಸ್ಯತ್ವ ಅನರ್ಹವಾಗಿದೆ.
2022ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಈ ಸದಸ್ಯರು ಆಯ್ಕೆಯಾಗಿದ್ದರು. 2024ರ ಜನವರಿ 9ರಂದು ಮೇಯರ್, ಉಪ ಮೇಯರ್ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ಮೆಹೆಜಬೀನ್ ಹೊರ್ತಿ ಮೇಯರ್ ಆಗಿ, ದಿನೇಶ ಹಳ್ಳಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಯಾವುದೇ ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡಿರಲಿಲ್ಲ.

Previous articleಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: ಆರೋಪಿಗಳಿಗೆ ಕಾರಾಗೃಹ ಶಿಕ್ಷೆ
Next articleದಿಢೀರ್ ಮಳೆಗೆ ದ್ರಾಕ್ಷಿ ಹಾನಿ