ವಿಜಯಪುರ ಜಿಲ್ಲೆಗೆ ಲಕ್ಷ ಕೋಟಿ ಬಂಡವಾಳ ತರುವ ಗುರಿ!

0
16

ಬಸವನಾಡಿನ ಭವಿಷ್ಯವನ್ನು ಉಜ್ವಲಗೊಳಿಸಲು ಬದ್ದನಾಗಿದ್ದೇನೆ.

ಬೆಂಗಳೂರು: ಬಸವನಾಡಿನ ಭವಿಷ್ಯವನ್ನು ಉಜ್ವಲಗೊಳಿಸಲು ಬದ್ದನಾಗಿದ್ದೇನೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿ ಹಂಚಿಕೊಂಡು ಪೋಸ್ಟ್‌ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈಗಾಗಲೇ ಜಿಲ್ಲೆಗೆ ರೂ.42,000 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದವಾಗಿದ್ದು, ಅದರಲ್ಲಿ ರೂ.34,000 ಕೋಟಿ ಹೂಡಿಕೆಗೆ ಸ್ಥಳ ಗುರುತಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 15,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಸಮೃದ್ಧ ಭೂಮಿ, ವಿದ್ಯುತ್ ಹಾಗೂ ನೀರಿನ ಸಂಪತ್ತನ್ನು ಹೊಂದಿದ್ದು, ಕೈಗಾರಿಕೆಗಳ ಬೆಳವಣಿಗೆಗೆ ಸಂಪೂರ್ಣ ಅನುಕೂಲಕರವಾಗಿದ್ದು, ಬಸವನಾಡಿನ ಭವಿಷ್ಯವನ್ನು ಉಜ್ವಲಗೊಳಿಸಲು ಬದ್ದನಾಗಿದ್ದೇನೆ ಎಂದಿದ್ದಾರೆ.

Previous articleರವಿ, ಲಕ್ಷ್ಮೀ ಪ್ರಕರಣ ಶೀಘ್ರ ಸುಖಾಂತ್ಯ
Next articleಪ್ರೇಮಲೋಕದ ಗುಂಗಲ್ಲಿ ಪೆರ್ರಿ