ವಾಹನಕ್ಕೆ ಡಿಕ್ಕಿ ಹೊಡೆದು ಚಿರತೆ ಸಾವು!

0
17

ದಾವಣಗೆರೆ: ರಸ್ತೆ ದಾಟುತ್ತಿದ್ದ ಚಿರತೆಯೊಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ಮಂಗಳವಾರ ತಡರಾತ್ರಿ ಸಂಭವಿಸಿದೆ.
ತಾಲೂಕಿನ ಆನಗೋಡು ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಚಿರತೆಯು ಅಲ್ಲಿಯೇ ಪ್ರಾಣ ಬಿಟ್ಟಿದೆ. ಅದೇ ಮಾರ್ಗದಲ್ಲಿ ಸಾಗುತ್ತಿದ್ದವರು ರಸ್ತೆ ಬದಿಯಲ್ಲಿ ಚಿರತೆ ತೀವ್ರ ರಕ್ತಗಾಯಗಳಿಂದ ಬಿದ್ದಿರುವುದನ್ನು ಕಂಡು ಪೊಲೀಸರು, ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಆನಗೋಡು ಭಾಗದಲ್ಲಿ ರೈತರು, ದಾರಿ ಹೋಕರು ಚಿರತೆಯನ್ನು ಕಂಡಿದ್ದರು. ಸಹಜವಾಗಿಯೇ ಒಬ್ಬಂಟಿಯಾಗಿ ಸಂಚರಿಸಲು, ಹೊಲಗಳಲ್ಲಿ ಕೆಲಸ ಮಾಡಲು, ಹೋಗಲು ಹಿಂದೇಟು ಹಾಕುವ ಸ್ಥಿತಿ ಇತ್ತು. ಚಿರತೆ ಸೆರೆ ಹಿಡಿಯುವಂತೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಚಿರತೆ ಅಪರಿಚಿತ ವಾಹನಕ್ಕೆ ಬಲಿಯಾಗಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Previous articleಬಿಜೆಪಿ ಆಂತರಿಕ ವಿಚಾರ ಕುಮಾರಸ್ವಾಮಿಗೆ ಯಾಕ್ ಬೇಕ್ರಿ?
Next articleರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ