ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2000 ಅಭ್ಯರ್ಥಿಗಳ ನೇಮಕಾತಿಗೆ ಆಗ್ರಹ

0
59

ಬೆಂಗಳೂರು: ಎಲ್ಲಾ ಅಭಿವೃದ್ಧಿ ವಿಚಾರದಲ್ಲೂ ಉತ್ತರ ಕರ್ನಾಟಕ ಭಾಗವನ್ನ ನಿರ್ಲಕ್ಷ್ಯ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಸಾರಿಗೆ ಸಂಸ್ಥೆ ನೇಮಕಾತಿ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ KSRTCಗೆ 2000, BMTC 2286,KKRTC 1619 ಅಭ್ಯರ್ಥಿಗಳ ನೇಮಕಾತಿ ಮಾಡಿದರೇ ಉತ್ತರ ಕರ್ನಾಟಕ ಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೇವಲ 1000 ಅಭ್ಯರ್ಥಿಗಳ ನೇಮಕಾತಿ ಮಾಡಿ ಅನ್ಯಾಯ ಮಾಡಿದೆ. ಈ ಹಿಂದೆ 2000 ಅಭ್ಯರ್ಥಿಗಳ ನೇಮಕಾತಿ ಆಗಲಿದೆ ಅಂತ ಆದೇಶ ಬಂದಿತ್ತು ಅದನ್ನೇ ನಂಬಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾದ 2000 ಸಾವಿರ ಅಭ್ಯರ್ಥಿಗಳು ನೇಮಕಾತಿಯ ಆಸೆಯಿಟ್ಟುಕೊಂಡಿದ್ದರು. ಆದ್ರೇ ಈಗ ಸಾವಿರ ಅಭ್ಯರ್ಥಿಗಳ ಜೀವನದ ಜೊತೆ ಸರ್ಕಾರ ಆಟ ಆಡುತ್ತಿದೆ. ಕೂಡಲೇ ಈ ಆದೇಶ ಹಿಂಪಡೆದು ,ಮೊದಲಿನ ಹಾಗೆ 2000 ಅಭ್ಯರ್ಥಿಗಳ ನೇಮಕಾತಿ ಮಾಡಬೇಕು ಅಂತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.

Previous articleನಂದಿನಿ ಬ್ರ್ಯಾಂಡ್‌ನ್ನು ಸರ್ವನಾಶ ಮಾಡಲು ಶಪಥ ಮಾಡಿದಂತಿದೆ…
Next article35 ಕೆಜಿ ಗಾತ್ರದ ಮೀನು ಬಲೆಗೆ