ವಾಮಾಚಾರ: ಬೆಚ್ಚಿ ಬಿದ್ದ ಜನ

0
21

ಬಳ್ಳಾರಿ: ನಗರದ ಮಾರ್ಕಂಡೇಶ್ವರ ಕಾಲೋನಿಯಲ್ಲಿ ಅಮವಾಸ್ಯೆ ದಿನದಂದು ವಾಮಾಚಾರ ಮಾಡಿಸಲಾಗಿದ್ದು, ನಿವಾಸಿಗಳು ಬೆಚ್ಚಿಬಿದ್ದಿದ್ಧಾರೆ.
೧೬ನೇ ವಾರ್ಡ್ನಲ್ಲಿ ಬರುವ ಮಾರ್ಕಂಡೇಶ್ವರ ಕಾಲೊನಿಯ ತುಂಬಿದ ಓಣಿಯಲ್ಲಿ ನಾಲ್ಕು ತಲೆಬುರಡೆ, ಹತ್ತಾರು ಎಲುಬುಗಳನ್ನು ಇಟ್ಟು, ಕೂದಲು ಸುಟ್ಟು, ದೀಪ ಹೆಚ್ಚಿಟ್ಟು ವಾಮಾಚಾರ ಮಾಡಿಸಲಾಗಿದೆ. ಅಮವಾಸ್ಯೆ ದಿನದಂದೇ ಹೀಗೆ ವಾಮಾಚಾರ ಮಾಸಿರುವುದು ಎಲ್ಲರಲ್ಲೂ ಆತಂಕ್ಕೆ ದೂಡಿದೆ. ಈ ಘಟನೆಯನ್ನು ನೋಡಿದ ನಿವಾಸಿಗಳು ಹತ್ತಿರದಲ್ಲಿನ ಕುಡಿವ ನೀರಿನ ಟ್ಯಾಂಕ್ ಬಳಿ ನೀರು ತರಲು ಹೋಗುವುದಕ್ಕೆ ಹಿಂಹರಿಯುತ್ತಿದ್ದಾರೆ ಅಲ್ಲದೇ ಅದೇ ಸ್ಥಳದ ಹತ್ತಿರ ಅಂಗನವಾಡಿ ಶಾಲೆಯೂ ಇದ್ದು ಮಕ್ಕಳನ್ನು ಕಳುಹಿಸದೇ ಪಾಲಕರು ಪಟ್ಟು ಹಿಡಿದರು. ಪದೇ ಪದೆ ಹೀಗೆ ಆಗುತ್ತಿದ್ದು ಇಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಬೇಕು. ಹೀಗೆ ಜನ ನಿವಾಸದ ಪ್ರದೇಶದಲ್ಲಿ ವಾಮಾಚಾರ ಮಾಡಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದರು. ಘಟನೆ ವಿಷಯ ತಿಳಿದು ಬ್ರೂಸ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ವಾಮಾಚಾರದ ವಸ್ತುಗಳನ್ನು ತೆರವು ಮಾಡಿಸಿ ನಿವಾಸಿಗಳಿಗೆ ಧೈರ್ಯ ತುಂಬಿದರು.

Previous articleಸಮುದ್ರ ಸ್ನಾನಕ್ಕೆ ತೆರಳಿದ್ದ ಬಾಲಕರು ನೀರುಪಾಲು
Next articleಮಹಜರು ವಿಧಾನ ವಿವರ ಒದಗಿಸಿದರೆ ಪರಿಶೀಲಿಸಿ ತೀರ್ಮಾನ