ಹುಬ್ಬಳ್ಳಿ: ಹದಿನೇಳು ವರ್ಷದ ಬಾಲಕಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯ ನಗರದ ಹೊರವಲಯದ ಬೈಪಾಸ್ ಹತ್ತಿರ ಬುಧವಾರ ನಡೆದಿದೆ.
ತಾಲೂಕಿನ ಶೆರೆವಾಡದ ನಾಲ್ವರ ಮೇಲೆ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಪೋನ್ ಕೊಡಿಸುವುದಾಗಿ ಹುಬ್ಬಳ್ಳಿಗೆ ಕರೆಯಿಸಿಕೊಂಡು ಹರ್ಷ ಕಾಂಪ್ಲೆಕ್ಸ್ ಹಾಗೂ ನೆಹರೂ ಮೈದಾನ ಹತ್ತಿರ ಕರೆದು ಅಲೆದಾಡಿದ್ದಲ್ಲದೆ, ನಗರದ ಹೊರವಲಯದ ಬೈ ಪಾಸ್ ಹತ್ತಿರ ಕರೆದೊಯ್ಯುದು ಆತ್ಯಾಚಾರ ವೆಸಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮಿಬ್ಬರ ಸ್ನೇಹಿತರ ಕರಿಸಿದ್ದು, ಅವರು ಸಹ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.