ವರದಕ್ಷಿಣೆಗೆ ಬೇಡಿಕೆ: ವರ ಜೈಲುಪಾಲು

0
6
ಜೈಲು

ಬೆಳಗಾವಿ(ಖಾನಾಪುರ): ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವರ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ಘಟನೆ ಪಟ್ಟಣದಲ್ಲಿ ಭಾನುವಾರ ವರದಿಯಾಗಿದೆ.
ಧಾರವಾಡ ಜಿಲ್ಲೆ ಹಳೇ ಹುಬ್ಬಳ್ಳಿಯ ನಿವಾಸಿ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಚೀನ ವಿಠ್ಠಲ ಪಾಟೀಲ ವರದಕ್ಷಿಣೆಗೆ ಬೇಡಿಕೆ ಇಟ್ಟ ವರ. ವಧು ನೀಡಿದ ದೂರಿನನ್ವಯ ಖಾನಾಪುರ ಠಾಣೆಯಲ್ಲಿ ವರ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. ವರನನ್ನು ವಶಕ್ಕೆ ಪಡೆದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು ನ್ಯಾಯಾಧೀಶರ ಸೂಚನೆ ಮೇರೆಗೆ ಆರೋಪಿ ವರನನ್ನು ಬೆಳಗಾವಿ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleಅಯೋಧ್ಯೆ ರಾಮ ಮೂರ್ತಿ ಆಯ್ಕೆ ಅಂತಿಮಗೊಂಡಿಲ್ಲ
Next articleಲಿಂಗಾಯತರನ್ನು ಹತ್ತಿಕ್ಕಿದರೆ ತಕ್ಕ ಶಾಸ್ತಿ