ವರದಕ್ಷಿಣೆ ಕಿರುಕುಳ ಆರೋಪ: ಆತ್ಮಹತ್ಯೆಗೆ ಶರಣಾದ ಮಹಿಳೆ

0
11
ಸಾವು

ಚಿಕ್ಕಮಗಳೂರು : ವರದಕ್ಷಿಣೆ ಕಿರುಕುಳದ ಆರೋಪ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಸುಭಿಕ್ಷಾ (25) ಮೃತ ದುರ್ದೈವಿ, ಮೃತಳಿಗೆ ಎರಡೂವರೆ ವರ್ಷದ ಒಂದು ಗುಂಡು ಮಗುವಿದೆ. ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಕಳೆದ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಜೊತೆ ವಿವಾಹವಾಗಿತ್ತು ನಿನ್ನ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು ತಹಶೀಲ್ದಾರ್ ಆಗಮಿಸದ ಹಿನ್ನೆಲೆ ಮೃತದೇಹವನ್ನ ಕೆಳಗಿಳಿಸಿರಲಿಲ್ಲ ಮದುವೆಯಾಗಿ 7 ವರ್ಷದ ಒಳಗೆ ಗೃಹಿಣಿ ಆತ್ಮಹತ್ಯೆಗೆ ಶರಣಾದರೆ ತಹಶೀಲ್ದಾರ್ ರಿಂದ ಸ್ಥಳ ಮಹಜರ್ ಆಗಬೇಕಾಗಿದೆ. ಮೃತಳ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪದ ದೂರಿನ ಹಿನ್ನೆಲೆಯಲ್ಲಿ ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಭೂಕುಸಿತ: ಜಲವಿದ್ಯುತ್ ಘಟಕಕ್ಕೆ ಹಾನಿ
Next article‘ಲ್ಯಾಟರಲ್​ ಎಂಟ್ರಿ’ ನೇಮಕಾತಿ ರದ್ದತಿಗೆ ಕೇಂದ್ರ ಸರ್ಕಾರ ಸೂಚನೆ