ವಯನಾಡು: ದುರಂತ ಸ್ಥಳಕ್ಕೆ ಸಚಿವ ಲಾಡ್ ಭೇಟಿ, ಪರಿಶೀಲನೆ

0
167

ವಯನಾಡು(ಕೇರಳ): ಗುಡ್ಡ ಕುಸಿತ ದುರಂತ ನಡೆದ ಕೇರಳದ ವಯನಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಬುಧವಾರ ತೆರಳಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹಲವು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದರು.
ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ದುರಂತದಲ್ಲಿ ಸಿಲುಕಿರುವ ಹಾಗೂ ನಾಪತ್ತೆಯಾಗಿರುವ ಕನ್ನಡಿಗರ ಮಾಹಿತಿ ಪಡೆದರು. ಅಗತ್ಯ ಸೂಚನೆಗಳನ್ನು ನೀಡಿದರು. ಅಲ್ಲದೇ ರಕ್ಷಣಾ ಪಡೆಗಳಿಂದ ಸಹ ಮಾಹಿತಿಗಳನ್ನು ಪಡೆದರು.
ಕೇರಳ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಚಿವರು, ಕನ್ನಡಿಗರ ರಕ್ಷಣೆಗೆ ಬೇಕಾದ ವ್ಯವಸ್ಥೆಗಳನ್ನು ಶೀಘ್ರವಾಗಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Previous articleದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ
Next articleಕೋಚಿಂಗ್ ಮಾಫಿಯಾಕ್ಕೆ ಇನ್ನೆಷ್ಟು ಬಲಿ?