ವಕ್ಫ್ ಕಾಯ್ದೆ ವಿರುದ್ಧ ಮುಸ್ಲಿಮರ ಪ್ರತಿಭಟನೆ

0
44

ಇಳಕಲ್: ಕೇಂದ್ರ ಸರಕಾರ ಜಾರಿ ಮಾಡಿದ ವಕ್ಫ್ ಕಾಯ್ದೆ ವಿರುದ್ಧ ಮುಸ್ಲಿಂ ಬಾಂಧವರು ಭಾರೀ ಪ್ರತಿಭಟನೆ ನಡೆಸಿದರು.
ಬಸವೇಶ್ವರ ಸರ್ಕಲ್‌ನಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಮಗೆ ನ್ಯಾಯ ಬೇಕು ಸರಕಾರ ವಕ್ಫ್ ಕಾಯಿದೆಯನ್ನು ಕೈ ಬಿಡಬೇಕು ಎಂದು ಹೇಳುತ್ತಾ ಸಾಗಿದರು.
ಕಂಠಿ ಸರ್ಕಲ್‌ಗೆ ಬಂದ ಪ್ರತಿಭಟನಾಕಾರರಲ್ಲಿ ಕೆಲವರು ಭಾಷಣ ಮಾಡಿ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಅಲ್ಲಿಂದ ಗೊರಬಾಳ ನಾಕಾ, ವಾಲ್ಮೀಕಿ ಮಂದಿರ, ಡೈಟ್ ಕಾಲೇಜು ಸರಕಾರಿ ಆಸ್ಪತ್ರೆ ಮಾರ್ಗವಾಗಿ ತಹಶೀಲ್ದಾರ್‌ಗೆ ತೆರಳಿ ಅಲ್ಲಿ ಮನವಿಪತ್ರವನ್ನು ತಹಸೀಲ್ದಾರ್ ಅವರಿಗೆ ಅರ್ಪಿಸಲಾಯಿತು.

Previous articleಭಾರತ vs ಬಾಂಗ್ಲಾದೇಶ ಸರಣಿ ವೇಳಾಪಟ್ಟಿ ಪ್ರಕಟ
Next articleಜೈಲಿನಿಂದಲೇ ಉದ್ಯಮಿಗೆ ಹಣದ ಬೇಡಿಕೆ