ವಕೀಲರಿಗೆ ಬರಬೇಕಾದ ಶುಲ್ಕವನ್ನು ಪಾವತಿ ಮಾಡಿ

0
31

ಬೆಂಗಳೂರು: ನ್ಯಾಯಯುತವಾಗಿ ಬರಬೇಕಾದ ಶುಲ್ಕವನ್ನು ತಡೆಹಿಡಿಯುವ ಮೂಲಕ ಸರ್ಕಾರ ದುಷ್ಟ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಸಂಯಕ್ತ ಕರ್ನಾಟಕ ಪತ್ರಿಕೆಯಲ್ಲಿ ಬಂದಿರುವ ಹುಬ್ಬಳ್ಳಿ ಗಲಭೆ: ಫೀಸ್‌ಗಾಗಿ ಕೋರ್ಟ್‌ಗೆ ಎಸ್ಸಿಪಿ ಎಂಬ ವರದಿ ಹಂಚಿಕೊಂಡು ಪೋಸ್ಟ್‌ ಮಾಡಿ ಹುಬ್ಬಳ್ಳಿ ಗಲಭೆಕೋರರ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವ ಸರ್ಕಾರದ ವಿಶೇಷ ಅಭಿಯೋಜಕರಿಗೆ (SPP) ಅವರಿಗೆ ಕಳೆದ ಎರಡು ವರ್ಷಗಳಿಂದ ಶುಲ್ಕ ಪಾವತಿ ಮಾಡದೆ ಸರ್ಕಾರ ಪರೋಕ್ಷವಾಗಿ ಗಲಭೆಕೋರರ ಪರ ನಿಂತಿದೆ. ಬಿಜೆಪಿ ಸರ್ಕಾರ ಇದ್ದಾಗ ನೇಮಕಗೊಂಡಿದ್ದಕ್ಕಾಗಿ ನನ್ನ ಶುಲ್ಕವನ್ನು ತಡೆ ಹಿಡಿಯಲಾಗಿದೆ ಎಂದು ಅವರಿಗೆ ಹೇಳಲಾಗಿದೆ.

ನ್ಯಾಯಯುತವಾಗಿ ಬರಬೇಕಾದ ಶುಲ್ಕವನ್ನು ತಡೆಹಿಡಿಯುವ ಮೂಲಕ ಸರ್ಕಾರ ದುಷ್ಟ ರಾಜಕಾರಣ ಮಾಡುತ್ತಿದೆ ಅಲ್ಲದೆ ಶುಲ್ಕ ನೀಡದ ಕಾರಣ ಅವರು ವಾದ ಮಾಡದೆ ಅಥವಾ ಕೋರ್ಟಿಗೆ ಹಾಜರು ಆಗದೆ ಗಲಭೆಕೋರರು ಖುಲಾಸೆ ಆಗಿ ತಮ್ಮ ವೋಟ್ ಬ್ಯಾಂಕ್ ಸುಭದ್ರವಾಗಿರುತ್ತದೆ ಎಂಬ ಚಿಂತನೆಯೂ ಸರ್ಕಾರಕ್ಕಿದೆ ಎಂಬುದು ಸ್ಪಷ್ಟವಾಗಿದೆ.

ಮಾನ್ಯ ಕಾನೂನು ಸಚಿವರು ತಮ್ಮ ಸುಧೀರ್ಘ ನಿದ್ರಾವಸ್ಥೆಯಿಂದ ಎದ್ದು ವಕೀಲರಿಗೆ ಬರಬೇಕಾದ ಶುಲ್ಕವನ್ನು ಪಾವತಿ ಮಾಡಿ ತಪ್ಪಿತಸ್ಥರ ಮೇಲೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ

Previous articleಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹುಮನಾಬಾದ್ ಶ್ರೀವೀರಭದ್ರೇಶ್ವರ ದೇವಸ್ಥಾನ ಭೂಮಿ ಸರ್ವೆ
Next articleತೆಂಗಿನ ತೋಟಕ್ಕೆ ಆನೆ ದಾಳಿ