ವಕೀಲನ ಹತ್ಯೆ: ಪ್ರಮುಖ ಆರೋಪಿ ಬಂಧನ

0
8


ಕಲಬುರಗಿ: ನಗರದಲ್ಲಿ ಗುರುವಾರ ಹಾಡಹಗಲೇ ನಡೆದಿದ್ದ ವಕೀಲ ಈರಣ್ಣಗೌಡ ಪಾಟೀಲ್ ಬರ್ಬರ ಹತ್ಯೆ ಪ್ರಕರಣದ
ಮಾಸ್ಟರ್ ಮೈಂಡ್ ಎನ್ನಲಾದ ಆರೋಪಿ ನೀಲಕಂಠ ಪಾಟೀಲ್ ನ್ನು
ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.

ಡಿ. 7ರಂದು ಕಲಬುರಗಿಯ ಸಾಯಿ‌ಮಂದಿರ ಬಳಿ ವಕೀಲರನ್ನು ಹತ್ಯೆಗೈದಿದ್ದರು. ಎರಡು‌ ದಿನಗಳ‌ ಹಿಂದೆ ಮೂವರು‌ ಆರೋಪಿಗಳನ್ನು ಬಂಧಿಸಿದ್ದರು. ಘಟನೆ ಬಳಿಕ‌ ಪ್ರಮುಖ‌ ಆರೋಪಿ ನೀಲಕಂಠ ತಲೆಮರೆಸಿಕೊಂಡಿದ್ದ.

ಶನಿವಾರ ತಡರಾತ್ರಿ ನೀಲಕಂಠ‌ನನ್ನು ಬಂಧಿಸಿದ್ದಾರೆ.

Previous articleಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ
Next articleಕೆಎಸ್ಆರ್ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ: ೨೦ ಜನರಿಗೆ ಗಾಯ