ವಂದೇ ಭಾರತ ಮಾದರಿಯಲ್ಲಿ ವಂದೇ ಮೆಟ್ರೋ

0
7

ವಂದೇ ಭಾರತ್ ರೈಲಿನ ಮಾದರಿಯಲ್ಲೇ `ವಂದೇ ಮೆಟ್ರೋ’ ರೈಲುಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸಂಚರಿಸಲಿವೆ. `ಮಹಾನಗರಗಳ ಸುತ್ತಮುತ್ತಲಿನ ಆರವತ್ತು ಕಿಲೋ ಮೀಟರ್ ಜನವಸತಿ ಪ್ರದೇಶಗಳು ವಂದೇ ಮೆಟ್ರೋ ರೈಲ್ವೆ ಸಂಚಾರ ವ್ಯಾಪ್ತಿಗೆ ಬರಲಿವೆ. ಇದರಿಂದ ಮಹಾನಗರಗಳಿಗೆ ಕೆಲಸಕ್ಕಾಗಿ ಬಂದು ಮನೆಗೆ ವೇಗವಾಗಿ ಮರಳುವುದಕ್ಕೆ ಅನುಕೂಲವಾಗಲಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಬಜೆಟ್ ನಂತರ ಪ್ರಕಟಿಸಿದ್ದಾರೆ. `ವಂದೇ ಮೆಟ್ರೋಗಳು ಕೂಡ ವಂದೇ ಭಾರತ್‌ನಂತೆಯೇ ವೇಗದ ಸಂಪರ್ಕ ರೈಲುಗಳಾಗಿರಲಿವೆ. ಪ್ರಸಕ್ತ ವಂದೇ ಭಾರತ್ ರೈಲುಗಳು ಬೃಹತ್ ನಗರಗಳ ಮಧ್ಯೆ ಸಂಚರಿಸುತ್ತಿದ್ದರೆ, ವಂದೇ ಮೆಟ್ರೋ ಮಹಾನಗರದ ಸುತ್ತಮುತ್ತಲಿನ 60 ಕಿಲೋ ಮೀಟರ್ ಜನವಸತಿಯನ್ನು ಗಮನದಲ್ಲಿಟ್ಟುಕೊಂಡು, ನಗರದ ಒಳಗೇ ಸಂಚರಿಸುವ ವಾಯುವೇಗದ ಸಿಟಿ ರೈಲುಗಳು’ ಎಂದಿದ್ದಾರೆ.

Previous articleಜೆಡಿಎಸ್‌ಗೆ ಸಾಮೂಹಿಕ ರಾಜೀನಾಮೆ
Next articleಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ