ಲೈನ್ ಮ್ಯಾನ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

0
32

ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೆ ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳ ನೇಮಕ ಆಗುತ್ತದೆ.

ಬೆಂಗಳೂರು: ಲೈನ್ ಮ್ಯಾನ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದರೆ ಅರ್ಹ ಅಭ್ಯರ್ಥಿಗಳ ನೇಮಕ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು KPTCL ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಪಾರದರ್ಶಕತೆ ಪ್ರದರ್ಶಿಸಬೇಕು. ಬೇರೆ ರಾಜ್ಯಗಳಲ್ಲಿಯೂ ಸಹ ಇದೆ ರೀತಿಯಾದ ನೇಮಕಾತಿ ಪ್ರಕ್ರಿಯೆ ಇರುವುದರಿಂದ ಕರ್ನಾಟಕವೂ ಸಹ ಇದೆ ಮಾದರಿಯನ್ನು ಅನುಸರಿಸಬೇಕು. ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೆ ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳ ನೇಮಕ ಆಗುತ್ತದೆ. ಇಲಾಖೆಗೆ ದಕ್ಷ, ಪ್ರಾಮಾಣಿಕ, ಸಮರ್ಥ ಹಾಗೂ ಅರ್ಹ ಸಿಬ್ಬಂದಿ ಸಿಕ್ಕಲ್ಲಿ ಇಲಾಖೆಯ ಉತ್ಪಾದಕತೆ ಹಾಗೂ ಕಾರ್ಯಕ್ಷಮತೆ ಹೆಚ್ಚುತ್ತದೆ. ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.

Previous articleರೈಲಿನಲ್ಲಿ ಯುವಕನ ಸುಲಿಗೆ ಮಾಡಿ ಕೊಲೆ ಮಾಡಿದ ದುರುಳರು
Next articleಭಾರತ ಜಾಗತಿಕ ಅನಿಮೇಷನ್ ಪವರ್ ಹೌಸ್