ಮೂಡುಬಿದಿರೆ: ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಅವರು ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್‌ನ್ನು ಹರಿದು ಹಾನಿಗೊಳಿಸಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಕರೀಂ ಅವರು ದೂರು ನೀಡಿ ಒಂದು ಗಂಟೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ಹಾಗೂ ತಂಡವು ಹೊಟೇಲ್ ಕಾರ್ಮಿಕರಾದ ಬಿಹಾರ ಮೂಲದ ಮಹಮ್ಮದ್ ಕಾಮ್ಡು ಝಮಾನ್ ಮತ್ತು ಜಾರ್ಖಂಡ್‌ನ ಮಹಮ್ಮದ್ ಸಿರಾಜ್ ಅನ್ಸಾರಿ ಎಂಬವರನ್ನು ಬಂಧಿಸಿ ಬೆಂಡೆತ್ತಿದ್ದಾರೆ. ದೂರು ನೀಡಿ ಗಂಟೆಗೂ ಮೊದಲೇ ಕಿಡಿಗೇಡಿಗಳನ್ನು ಬಂಧಿಸಿರುವುದಕ್ಕೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.