ರೈಲ್ವೆ ಕೆಳಸೇತುವೆಯಲ್ಲಿ ನೀರು: ಬೈಕ್ ಹೊತ್ತು ದಾಟಿದ ವ್ಯಕ್ತಿ

0
15

ರಾಯಚೂರು: ಮಳೆ ನೀರು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ತಲೆಯ ಮೇಲೆ ಹೊತ್ತುಕೊಂಡು ರೈಲ್ವೆ ಕೆಳಸೇತುವೆ(ಅಂಡರ್‌ಪಾಸ್) ದಾಟಿದ ಪ್ರಸಂಗ ತಾಲ್ಲೂಕಿನ ಕರೇಕಲ್ ಗ್ರಾಮದ ಸಮೀಪದ ನಡೆದಿದೆ.
ಕರೇಕಲ್ ಗ್ರಾಮದ ನಿವಾಸಿ ಮೈಲಾರಲಿಂಗ ಎಂಬುವವರೇ ಬೈಕ್ ತಲೆಯ ಮೇಲೆ ಹೊತ್ತುಕೊಂಡು ರೈಲ್ವೆ ಕೆಳಸೇತುವೆ ದಾಟಿದ್ದಾರೆ. ರೈಲ್ವೆ ಕೆಳಸೇತುವೆಯಲ್ಲಿ ಸಾಕಷ್ಟು ಮಳೆ ನೀರು ನಿಂತಿರುವುದರಿಂದ ಬೈಕ್‌ಗೆ ಸಮಸ್ಯೆಯಾಗಬಹುದು ಎಂಬ ಆತಂಕದಿಂದ ತನ್ನ ಬೈಕ್‌ನ್ನು ತಲೆಯ ಮೇಲೆ ಇಟ್ಟುಕೊಂಡು ಸೇತುವೆ ದಾಟಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Previous articleಅಪಘಾತ: ಮಹಿಳೆ ಸಾವು
Next articleಕೂದಲೆಳೆ ಅಂತರದಲ್ಲಿ ಬಚಾವ್ ಆದ ಶಾಸಕ..!