ರೈಲಿನಲ್ಲಿ ಚಾಕು ಇರಿತ ಪ್ರಕರಣ: ಕೊಲೆ ಮಾಡಿ ಪರಾರಿಯಾದವನ ರೇಖಾಚಿತ್ರ ಬಿಡುಗಡೆ

0
8

ಬೆಳಗಾವಿ: ಕೆಲ ದಿನಗಳ ಹಿಂದೆ ಚಲಿಸುತ್ತಿದ್ದ ರೈಲಿನಲ್ಲಿ ಚಾಕುವಿನಿಂದ ಇರಿದು ಪರಾರಿಯಾದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಹಲ್ಲೆಗೊಳಗಾದ ಸಿಬ್ಬಂದಿ ಆರೋಪಿಯನ್ನು ಗುರುತಿಸಿದ್ದು, ಆರೋಪಿಯ ರೇಖಾ ಚಿತ್ರವನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿ ಬಿಡುಗಡೆಗೊಳಿಸಿದ್ದಾರೆ. ಎರಡು ದಿನಗಳ ಹಿಂದೆ ಖಾನಾಪುರ ತಾಲ್ಲೂಕಿನ ಲೋಂಡಾದಲ್ಲಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ನಡೆದಿತ್ತು. ಟಿಕೆಟ್ ತೋರಿಸು ಎಂದಿದ್ದಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿ ಚೂರಿಯಿಂದ ದಾಳಿ ಮಾಡಿದ್ದ. ಘಟನೆಯಲ್ಲಿ ನಾಲ್ವರು ರೈಲ್ವೆ ಸಿಬ್ಬಂದಿ ಹಾಗೂ ಓರ್ವ ಪ್ರಯಾಣಿಕನ ಮೇಲೆ ದಾಳಿ ಆಗಿತ್ತು. ಚಿಕಿತ್ಸೆ ಫಲಿಸದೇ ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಮೂಲದ ಕೋಚ್ ಅಟೆಂಡರ್ ದೇವ‌ಋಷಿ ವರ್ಮಾ (23) ಮೃತಪಟ್ಟಿದ್ದರು. ಸದ್ಯ ಆರೋಪಿ ರೇಖಾಚಿತ್ರ ಹಾಗೂ ಸಿಸಿ ಕ್ಯಾಮರಾ ದೃಶ್ಯಗಳು ಲಭ್ಯವಾಗಿವೆ. ಟಿಸಿ ಅಶ್ರಫ್ ಅಲಿ ಕಿತ್ತೂರು ಸೇರಿ ಇನ್ನುಳಿದ ಮೂವರೂ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ನಡೆದು ಎರಡು ದಿನ ಕಳೆದರೂ ಹಂತಕನ ಸುಳಿವು ಸಿಕ್ಕಿರಲಿಲ್ಲ. ರೈಲ್ವೆ ಪೊಲೀಸರಿಂದ ವಿಶೇಷ ತಂಡ ರಚಿಸಲಾಗಿದೆ.

Previous articleಕ್ಯಾಂಟರ್ ಅಡ್ಡಗಟ್ಟಿ, ಖಾರದ ಪುಡಿ ಎರಚಿ 32 ಲಕ್ಷ ರೂ. ದರೋಡೆ
Next articleಶಶಿ ಸಾಲಿ `ಕ್ಲಿಕ್’ ಚಮತ್ಕಾರ ಪ್ರತಿಭೆ