ರೆಡ್ಡಿ ವಿಚಾರ ಹೈಕಮಾಂಡ್ ಜೊತೆ ಮಾತನಾಡುವೆ

0
15
ರಾಮಲು

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿ ಬಗ್ಗೆ ಹೊರಹಾಕಿರುವ ಅಸಮಾಧಾನದ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸುವೆ ಎಂದು ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ವೇಳೆ ಜನಾರ್ದನ ರೆಡ್ಡಿ ಅವರು ಬಿಜೆಪಿ ಕುರಿತು ಬೇಸರಿಸಿಕೊಂಡು ಮಾತನಾಡಿದ್ದರು. ಈ ಕುರಿತು ಮಾತನಾಡಿದ ಅವರು, ರೆಡ್ಡಿ ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಆದರೆ, ಕೆಲ ಕಾರಣಗಳಿಂದ ಅವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು ಎಂಬುದು ನಮ್ಮ ಆಶಯ ಎಂದರು.
ಅಸಮಾಧಾನ ಆದ ಕುರಿತು ಅವರೊಂದಿಗೆ ಸಹ ಮಾತುಕತೆ ನಡೆಸುವೆ. ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲು ಯತ್ನಿಸುವೆ ಎಂದರು.

Previous articleಕನ್ನಡಿಗರ ಪುಣ್ಯಭೂಮಿಯಲ್ಲಿ ನಾಡದ್ರೋಹಿಗಳ ಅಟ್ಟಹಾಸ..!
Next articleಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…. ಗೀತೆಗೆ ಹೆಜ್ಜೆ ಹಾಕಿದ ಆಯುಕ್ತ