ಅಮೆರಿಕದಲ್ಲೂ ರಾಹುಲ್ ಟ್ರಕ್ ಯಾತ್ರೆ

0
13

ವಾಷಿಂಗ್ಟನ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದು. ಅವರು ಇತ್ತೀಚೆಗೆ ಟ್ರಕ್‌ನಲ್ಲಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ 190 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ಟ್ರಕ್ ಚಾಲಕ ತೇಜಿಂದರ್ ಗಿಲ್ ಅವರೊಂದಿಗೂ ಮಾತನಾಡಿದ್ದು. ಈ ಸಂಭಾಷಣೆಯ ವಿಡಿಯೋವನ್ನು ರಾಹುಲ್ ಕೂಡ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ಟ್ರಕ್ ಚಾಲಕನ ಮಾಸಿಕ ಗಳಿಕೆಯ ಬಗ್ಗೆಯೂ ರಾಹುಲ್ ಪ್ರಶ್ನಿಸಿದ್ದಾರೆ. ಚಾಲಕ ತೇಜಿಂದರ್ ಗಿಲ್ ತಿಂಗಳ ಗಳಿಕೆಯನ್ನು ಹೇಳಿದಾಗ, ರಾಹುಲ್ ಕೂಡ ದಿಗ್ಭ್ರಮೆಗೊಂಡರು. ರಾಹುಲ್ ಗಾಂಧಿ ಈ ಹಿಂದೆ ಪಂಜಾಬ್‌ನಲ್ಲೂ ಟ್ರಕ್ ಟ್ರಿಪ್ ಮಾಡಿದ್ದರು. ನಂತರ ಅವರು ಅಮೃತಸರದ ಟ್ರಕ್ ಚಾಲಕರೊಂದಿಗೆ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Previous articleನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ
Next articleಕೆ ಆರ್ ಎಸ್ ಹಿನ್ನೀರಿನಲ್ಲಿ ಈಜಲು ಹೋಗಿ ಇಬ್ಬರು ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು