ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಬ್ಬ ಅರೇಜ್ಞಾನಿ(ಅನ್‌ಮ್ಯೆಚುರಡ್) ಮನುಷ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಆರ್‌ಎಸ್‌ಎಸ್ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಯಿಸಿ, ಕ್ರಿಶ್ಚಿಯನ್‌ರ ಆಸ್ತಿಯನ್ನು ವಕ್ಫ್ ಮಾಡಲು ಹೊರಟಿದ್ದರು. ನಾವು ಈಗ ಬದಲಾವಣೆ ತಂದಿದ್ದೆವೆ ಹೀಗಾಗಿ ಕೇರಳದಲ್ಲಿ ಕ್ರಿಶ್ಚಿಯನ್‌ರು ಸಹ ಸ್ವಾಗತಿಸಿ ಸೆಲೆಬ್ರೇಷನ್ ಮಾಡಿದ್ದಾರೆ ಎಂದರು.
ಲೋಕಸಭೆಯಲ್ಲಿ ವಕ್ಫ್ ಚರ್ಚೆ ಅಪರಾಹ್ನ 12 ರಿಂದ ರಾತ್ರಿ 2ರವರೆಗೆ ನಡೆದರೂ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ್ ವಾದ್ರಾ ಲೋಕಸಭೆಗೆ ಬರಲೇ ಇಲ್ಲ ಆದರೆ ಹೊರಗಡೆ ಮಾತ್ರ ವಿನಾಕಾರಣ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇದು ಜನರಿಗೆ ತಿಳಿಯದೇ ಇರದು ಇನ್ನು ಹಲವಾರು ವರ್ಷಗಳ ಕಾಲ ಬಿಜೆಪಿ ದೇಶದಲ್ಲಿ ಆಡಳಿತ ಮಾಡಲಿದೆ ಎಂದರು