ರಾಯಚೂರ: ಚಾಕೋಲೇಟ್ ರೂಪದಲ್ಲಿ ಗಾಂಜಾ ಮಾರಾಟ

0
10

ರಾಯಚೂರು: ರಾಯಚೂರಿನ ಮನೆಯೊಂದರಲ್ಲಿ ಗಾಂಜಾ ಮಾರಾಟವಾಗುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಗಾಂಜಾವನ್ನು ಚಾಕೊಲೇಟ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.
30, 50, 100ರೂ. ಗೆ ಗಾಂಜಾ ಚಾಕೊಲೇಟ್ ಚಾಕೋಲೇಟ್(ಮಿಠಾಯಿ) ಮಾರಾಟ ಮಾಡಲಾಗುತ್ತಿತ್ತು. 6 ಗ್ರಾಂ. ತೂಕದ ಗಾಂಜಾ ಚಾಕೊಲೇಟ್ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಉತ್ತರಪ್ರದೇಶದಲ್ಲಿ ತಯಾರಿಸಿದ ಚಾಕೊಲೇಟ್‌ನಂತೆ ತಯಾರಿಸಿ ಗಾಂಜಾ ಚಾಕೊಲೇಟ್ ರಾಯಚೂರಿನಲ್ಲಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾ ಚಾಕೊಲೇಟ್ ಮಾಡುತ್ತಿದ್ದ ಅರೋಪಿಗಳನ್ನು ಬಂಧಿಸಿ ಗಾಂಜಾ ಚಾಕೋಲೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಎಲ್.ಬಿ.ಎಸ್ ನಗರ ಬಡಾವಣೆ ಮತ್ತು ಕೈಗಾರಿಕಾ ಪ್ರದೇಶದ ಏರಿಯಾಗಳಲ್ಲಿ ಹಲವು ದಿನಗಳಿಂದ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡಲಾಗುತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಶ್ರೀಪಾನಾ ಮುನಾಕಾ, ಶ್ರೀ ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿದೆ. ಒಟ್ಟು 482 ಗಾಂಜಾ ಚಾಕೊಲೇಟ್ ಗಳನ್ನು ಜಪ್ತಿಪಡಿಸೊಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಚಯ್ಯ ಸ್ವಾಮಿ ಹಾಗೂ ಅಂಬರಯ್ಯ ಎಂಬ ಆರೋಪಿಗಳು ಚಾಕೋಲೇಟ್ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆಹಾಕಿದ ಅಬಕಾರಿ ಪೊಲೀಸರು ಕಿಂಗ್ ಪಿನ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಸದ್ಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮೊಬೈಲ್ ಚಾರ್ಜರ್‌ನಿಂದ ಶಾಕ್‌: 8 ತಿಂಗಳ ಮಗು ಸಾವು!
Next articleಪ್ರಕೃತಿ ದೋಷ ರಹಿತ ಶ್ರೀರಾಮಚಂದ್ರ