ರಾಮಹುಳು ಕಡಿದು ವ್ಯಕ್ತಿ ಸಾವು

0
18
ರಾಮಹುಳು

ದಾವಣಗೆರೆ: ವಿಷಕಾರಿ ಜೇನು ಜಾತಿಯ ರಾಮ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ.ಪಿ.ಶಿವಕುಮಾರ ಅಲಿಯಾಸ್ ಬಾಬಣ್ಣ (49) ಸಾವನ್ನಪ್ಪಿರುವ ದುರ್ದೈವಿ. ಹುಳು ಕಡಿದ ತಕ್ಷಣ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ರವಾನೆ ಮಾಡಲಾಯಿತಾದರೂ ಚಿಕಿತ್ಸೆ ಆರಂಭಿಸುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ವಿಚಿತ್ರವಾಗಿ ಗೂಡು ಕಟ್ಟುವ ಈ ಹುಳುವಿಗೆ ಬಲಿಯಾದ ಎರಡನೇ ವ್ಯಕ್ತಿ ಇವರಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದು, ಆ ರಾಮ ಹುಳು ಓಡಿಸುವಂತೆ, ಗೂಡುಗಳನ್ನ ನಾಶ ಮಾಡುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Previous articleಟಿಪ್ಪು ಜಯಂತಿ ಆಚರಣೆ ವಿರೋಧ: ಮುತಾಲಿಕ್‌ ಸೇರಿ ಹಲವು ಕಾರ್ಯಕರ್ತರು ಪೊಲೀಸ್‌ ವಶಕ್ಕೆ
Next articleಸಿಂಪಲ್‌ ಸುನಿ ಮೆಚ್ಚಿದ ಚಿನ್ನಿಯ ಮಾತು