ಕಾರವಾರ: ನೌಕಾ ದಿನಾಚರಣೆ ಅಂಗವಾಗಿ ಕದಂಬ ನೌಕನೆಲೆಗೆ ಭೇಟಿ ನೀಡಿರುವ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಬುಧವಾರ ಆಯೋಜಿಸಿದ್ದ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನೇವಿ ಹೌಸ್‌ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ನೇವಿ ಬ್ಯಾಂಡ್ ಆಕರ್ಷಕ ಸಂಗೀತ ಹಾಗೂ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯಪಾಲರು ಆಸಕ್ತಿಯಿಂದ ವೀಕ್ಷಿಸಿದರು.
೧೯೬೧ರಲ್ಲಿ ಪೋರ್ಚುಗೀಸ್ ಅವರಿಂದ ಅಂಜದೀವ್ ದ್ವೀಪವನ್ನು ವಿಮೋಚನೆಗೊಳಿಸಿದ ವೀರ ಯೋಧರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರವಾರದ ನೌಕಾ ನೆಲೆಯ ಸ್ಮಾರಕದಲ್ಲಿ ಪುಷ್ಪಗುಚ್ಛವಿರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್ ವಿ.ಎಸ್.ಎಂ ಹಾಜರಿದ್ದರು.
ಬಳಿಕ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಕ್ಯಾಪ್ಟನ್ ಬೀರೇಂದ್ರ ಎಸ್.ಬೈನ್ಸ್ ನೌಕೆ ಬಗ್ಗೆ ಮಾಹಿತಿ ನೀಡಿದರು.