ರಾಜ್ಯದಲ್ಲಿ ಮೂರು ಡಿಸಿಎಂ ವಿಚಾರ ಹೈಕಮಾಂಡ್ ಮುಂದೆ ಇಲ್ಲ

0
23

ಕಲಬುರಗಿ: ರಾಜ್ಯದಲ್ಲಿ ಮೂರು ಡಿಸಿಎಂ ವಿಚಾರ ನಮ್ಮ ಮುಂದೆ ಬಂದಿಲ್ಲ. ಈ ವಿಚಾರ ನೀವು ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರಿಗೆ ಕೇಳಿ, ನಮ್ಮ‌ ಮುಂದೆ ಇಂತಹ ಯಾವ ಪ್ರಸ್ತಾವನೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲಾ ಉಹಾಪೋಹ. ಎಲೆಕ್ಷನ್ ಸಂದರ್ಭದಲ್ಲಿ ಇಂತಹ ವಿಚಾರ ಬರಬಾರದು. ಸದ್ಯಕ್ಕೆ ಸರಕಾರ ನಡೆಸುವ ಕಡೆಗೆ, ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು ಎಂದರು.
ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. ಆ ಕೆಲಸವನ್ನು ಸಿದ್ದರಾಮಯ್ಯ , ಡಿ. ಕೆ. ಶಿವಕುಮಾರ, ಪರಮೇಶ್ವರ ಎಲ್ಲರೂ ಮಾಡುತ್ತಿದ್ದಾರೆ. ನಮ್ಮ ಗುರಿ ಮುಟ್ಟುವರೆಗೆ ಇಂತಹದಕ್ಕೆ ಅವಕಾಶ ಕೊಡಬಾರದು ಎಂದರು.

Previous articleಕರುನಾಡ ಕರಾವಳಿಗೆ ಮನಸೋಲದವರಾರು?
Next articleಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ