ಬೆಂಗಳೂರು: ರಾಜ್ಯದಲ್ಲಿನ ಕೈಗಾರಿಕಾ ಅಭಿವೃದ್ಧಿಗೆ ಕೈ ಜೋಡಿಸಿ ಹೂಡಿಕೆ ಮಾಡಲು ಹಲವು ಕಂಪೆನಿಗಳ ಆಸಕ್ತಿ ತೊರಿರುವುದು ಹರ್ಷ ತಂದಿದೆ ಎಂದು ಸಚಿವ ಎಂ. ಬಿ ಪಾಟೀಲ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್ ಈ ದಿನ ರೋಡ್ ಶೋ ನಡೆಸಿ, ಮಾತನಾಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು. ಫ್ಯೂಚರ್ ಮೊಬಿಲಿಟಿ, ಅಡ್ವಾನ್ಸ್ಟ್ ಮೆಶಿನರಿ, ಸ್ಪೇಸ್ ಟೆಕ್ ಸೇರಿದಂತೆ ಹೂಡಿಕೆಗಿರುವ ವಿವಿಧ ವಲಯಗಳ ಕುರಿತು ತಿಳಿಸಿದೆ. ರಾಜ್ಯ ಸರ್ಕಾರದಿಂದ ದೊರೆಯಲಿರುವ ರಿಯಾಯಿತಿಗಳು,ಮೂಲಸೌಕರ್ಯಗಳ ಮಾಹಿತಿ ನೀಡಿ, ರಾಜ್ಯದಲ್ಲಿರುವ ಉದ್ಯಮ ಸ್ನೇಹಿ ವಾತಾವರಣಗಳ, ನುರಿತ ಕಾರ್ಮಿಕ ವರ್ಗ ಮುಂತಾದ ಸಂಗತಿಗಳ ಬಗೆಗೆ ಮನವರಿಕೆ ಮಾಡಿ, ಹೂಡಿಕೆ ಮಾಡುವಂತೆ ಆಹ್ವಾನ ನೀಡಿದೆ. ಉದ್ಯಮ ವಲಯದ ದಿಗ್ಗಜರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಆಹ್ವಾನವನ್ನು ಒಪ್ಪಿ ಹಲವಷ್ಟು ಕಂಪೆನಿಗಳು ಒಡಂಬಡಿಕೆಗೆ ಅಂಕಿತ ಹಾಕಿ, ರಾಜ್ಯದಲ್ಲಿನ ಕೈಗಾರಿಕಾ ಅಭಿವೃದ್ಧಿಗೆ ಕೈ ಜೋಡಿಸಿರುವುದು ಹರ್ಷ ತಂದಿದೆ ಎಂದಿದ್ದಾರೆ.