ರಾಜ್ಯದಲ್ಲಿ 50 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ

0
13

ಸಿಂಧನೂರು: 2023ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ 50ಸ್ಥಾನಕ್ಕಿಂತ ಒಂದು ಸ್ಥಾನವೂ ಹೆಚ್ಚಿಗೆ ಗೆಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರಕ್ಕೆ ಖಾಸಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಬಿಜೆಪಿ ಸರ್ಕಾರದ ಹುಸಿ ಸುಳ್ಳುಗಳಿಂದ ಜನತೆ ಬೇಸತ್ತು ಹೋಗಿದ್ದು 2023ರ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ 50 ಸ್ಥಾನಕ್ಕಿಂತ ಒಂದು ಸ್ಥಾನ ಹೆಚ್ಚಿಗೆ ಗೆಲುವುದಿಲ್ಲ. ಕಾಂಗ್ರೆಸ್ 130ರಿಂದ150 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಚನೆಯಿಂದ ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಎಂದು ಆರೋಪಿಸಿದರು.
ರಾಜ್ಯದ ಜನತೆಯ ಪ್ರೀತಿ, ವಿಶ್ವಾಸ, ಅಭಿಮಾನ ಇರುವುದರಿಂದ ನಾನು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ದಿಸಿದರು ಗೆಲ್ಲುತ್ತೇನೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಬಂದು ಸ್ಪರ್ದೆ ಮಾಡಿ ಎಂದು ಅಭಿಮಾನಿಗಳು ತಮ್ಮ ಸ್ವಂತ ಜಮೀನು ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಮೌಲ್ಯದ ಚೆಕ್ ನೀಡಲು ಬಂದಿದ್ದರು ಎಂದು ತಿಳಿಸಿ. ಬಾದಾಮಿ ಕ್ಷೇತ್ರ ಬೆಂಗಳೂರುನಿಂದ ದೂರವಾಗುತ್ತಿದೆ ಹಾಗಾಗಿ ಈ ಬಾರಿ ಅಲ್ಲಿ ಸ್ಪರ್ದೆ ಮಾಡುತ್ತಿಲ್ಲ. ಕೋಲಾರ ಸಮೀಪವಾಗುತ್ತದೆ ಎಂಬುವುದಕ್ಕೆ ಅಲ್ಲಿ ಸ್ಪರ್ದೆ ಮಾಡಲು ಇಚ್ಚೀಸಿದ್ದೇನೆ. ಅಲ್ಲದೆ ನನ್ನ ಮಗ ಕೂಡ ವರುಣ ಕ್ಷೇತ್ರದಿಂದ ಸ್ಪರ್ದೆ ಮಾಡಿ ಎಂದು ಹೇಳುತ್ತಿದ್ದಾನೆ. ಕೊನೆಗೆ ಹೈಕಮಾಂಡ್ ಎಲ್ಲಿ ಹೇಳುವುದು ಅಲ್ಲಿ ಸ್ಪರ್ದೆ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ಹಣ ಇದೆ ಎಂದು ಪಕ್ಷ ಸ್ಥಾಪನೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ ವಿಜಯ ಸಂಕೇಶ್ವರ, ಖೇಣಿಯವರ ಹೊಸ ಪಕ್ಷ ಸ್ಥಾಪನೆ ಮಾಡಿ ವಿಫಲವಾಗಿಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದರಿಂದ ಕೃಷ್ಣ ಮೇಲ್ದಂಡೆ ಸೇರಿದಂತೆ ಅನೇಕ ಯೋಜನೆಗಳ ವಿಳಂಬವಾಗಿವೆ. ರಾಜ್ಯದ ಬಿಜೆಪಿ ಮುಖಂಡರಿಗೆ ನರೇಂದ್ರ ಮೋದಿಯವರನ್ನು ಕೇಳುವಷ್ಟು ಧಮ್ ಇಲ್ಲ ಎಂದು ಟೀಕಿಸಿದರು.

Previous articleಫೆ. 14 ರಂದು ನವಲಗುಂದಕ್ಕೆ ಕುಮಾರಸ್ವಾಮಿ ಆಗಮನ
Next articleಕೋಲಾರ: ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ