ಬೆಂಗಳೂರು : ಉತ್ತರ ಕರ್ನಾಟಕದ ಭಾಗದಲ್ಲಿ ಕಲಿಯುಗ ಕುಡುಕ ನಾಟಕದಿಂದಲೇ ಪ್ರಸಿದ್ದರಾದ ರಾಜು ತಾಳಿಕೋಟೆ ಅವರಿಗೆ ರಂಗಾಯಣದ ನಿರ್ದೇಶಕ ಸ್ಥಾನ ಲಭಿಸಿದೆ.
06 ರಂಗಾಯಣಗಳಿಗೆ ನಿರ್ದೇಶಕರನ್ನು ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಮುಂದಿನ ಮೂರು ವರ್ಷದ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸದಸ್ಯರನ್ನು ನೇಮಕಾ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಧಾರವಾಡ ರಂಗಾಯಣಕ್ಕೆ: ರಾಜು ತಾಳಿಕೋಟೆ, ಮೈಸೂರು ರಂಗಾಯಣಕ್ಕೆ: ಸತೀಶ್ ತಿಪಟೂರು, ಶಿವಮೊಗ್ಗ ರಂಗಾಯಣಕ್ಕೆ: ಪ್ರಸನ್ನ ಡಿ. ಸಾಗರ, ಕಲಬುರ್ಗಿ ರಂಗಾಯಣಕ್ಕೆ: ಡಾ. ಸುಜಾತ ಜಂಗಮ ಶೆಟ್ಟಿ, ದಾವಣಗೆರೆ ರಂಗಭೂಮಿ ರಂಗಾಯಣಕ್ಕೆ: ಮಲ್ಲಿಕಾರ್ಜುನ ಕಡಕೋಳ, ಕಾರ್ಕಳ ಯಕ್ಷ ರಂಗಾಯಣಕ್ಕೆ: ವೆಂಕಟರಮಣ ಐತಾಳ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ.
ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರ ಸ್ಥಾನಗಳಿಗೆ ನಾಮನಿರ್ದೇಶನಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ: ಈ ನೇಮಕಾತಿ ಮುಂದಿನ ಮೂರು ವರ್ಷದ ಅವಧಿಗೆ ಇರುತ್ತದೆ ಎಂದು ಆದೇಶದಲ್ಲಿ ಸಚಿವರು ತಿಳಿಸಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾಗಿ ‘ಅಕ್ಷತಾ ಎಂ.ನಾಯಕ್’ ನೇಮಕ, ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ‘ವಿನೋದ್ ಮೂಡಗಡದ್ದೆ’ ನೇಮಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ‘ರಾಘವೇಂದ್ರ ಕಿನ್ನಾಳ’ (ಕೊಪ್ಪಳ) ನೇಮಕ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ‘ಶಿವಪ್ರಸಾದ್’ (ಚನ್ನಪಟ್ಟಣ) ನೇಮಕ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ‘ಎಚ್‌ಎಸ್ ಮಂಜುನಾಥ್’ (ಹಾಸನ) ನೇಮಕ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾಗಿ ‘ಲಕ್ಷ್ಮಣ ಹಣಮಂತ ದೇಸಾರಟ್ಟಿ’ (ಬಾಗಲಕೋಟೆ) ಅವರನ್ನು ನೇಮಕ ಮಾಡಲಾಗಿದೆ.