ರಾಜ್ಯ ಸರಕಾರಕ್ಕೆ ಅಭದ್ರತೆ ಕಾಡುತ್ತಿದೆ

0
21

ಚಿಕ್ಕಬಳ್ಳಾಪುರ: 135 ಜನ ಶಾಸಕರ ಬೆಂಬಲ ಇದ್ದರೂ ಸರಕಾರಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಕೀಲಿ ಸುರ್ಜೆವಾಲಾ ಮತ್ತು ವೇಣುಗೋಪಾಲರ ಬಳಿ ಇವೆ. ಇವರು ರಾಜ್ಯದ ಖಜಾನೆಯನ್ನು ಜನರಿಗೆ ಬಳಸದೆ ಪಕ್ಷದ ಖಜಾನೆ ತುಂಬಿಸಲು ಹೊರಟಿದ್ದಾರೆ ಎಂದರು.
ಒಬ್ಬರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಮತ್ತೊಬ್ಬರು ಕುರ್ಚಿ ಪಡೆಯಲು ಹೋರಾಡುತ್ತಿದ್ದಾರೆ. ರೈತರಿಗೆ ಸ್ಪಂದಿಸದೆ ಹೋದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

Previous articleಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ
Next articleಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ