ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿತತೆ; ಕೋಡಿಶ್ರೀ ಭವಿಷ್ಯ

0
9

ಹುಬ್ಬಳ್ಳಿ: ರಾಜಕೀಯದ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಕಾಡಲಿದೆ ಎಂದು ಎಚ್ಚರಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಹುಬ್ಬಳ್ಳಿಗೆ ಆಗಿಸಿದ್ದ ಶ್ರೀಗಳು ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಯುಗಾದಿಯ ವರೆಗೆ ಎಲ್ಲವೂ ಸರಿಯಾಗಿರಲಿದೆ. ಯುಗಾದಿ ನಂತರ ಏನಾಗುತ್ತದೆ ಎಂದು ಕಾದುನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಯಿಸಲು ನಿರಾಕರಿಸಿದ ಶ್ರೀಗಳು, ಇದು ಅವರವರ ವಿಚಾರ ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೇವೆ. ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಎಂದರು.
ಬರಗಾಲದ ವಿಚರವಾಗಿ ಮಾತನಾಡಿ, ಮನುಷ್ಯ ಮಾಡಿದ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯನ ಪಾಪ ಕರ್ಮಗಳು ಮನುಷ್ಯನನ್ನ ಕ್ಷಮಿಸುವುದಿಲ್ಲ. ಮಾನವನ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ.ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.

Previous articleಜಿಲ್ಲೆಯ ಶಾಸಕರು ರೈತರ ಪರ
Next articleಸಹಜ ಸ್ಥಿತಿಯತ್ತ ಬೆಂಗಳೂರು