ಹುಣಸಗಿ: ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡರ ಸೋಲಿನ ವಿಷಯ ಕೇಳಿ ಜಿ.ಪಂ. ಮಾಜಿ ಉಪಾಧ್ಯಕ್ಷರು ಆಘಾತಕ್ಕೆ ಒಳಗಾಗಿ, ಕೋಮಾದಲ್ಲಿದ್ದು. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗದ್ದೆಫ್ ಪೂಜಾರಿ ಆಘಾತಕ್ಕೆ ಒಳಗಾದ ವ್ಯಕ್ತಿ. ರಾಜುಗೌಡರ ಪಟ್ಟಾ ಬೆಂಬಲಿಗರಾಗಿ, ಅಭಿಮಾನಿಯಾಗಿದ್ದ ಇವರನ್ನು, ಮೊದಲು ಜೊಗುಂಡಭಾವಿ ಗ್ರಾ.ಪಂ. ಗೆ ಅಧ್ಯಕ್ಷರನ್ನಾಗಿ, 2005 ರ ಜಿ.ಪಂ, ಚುನಾವಣೆಯಲ್ಲಿ ಕೊಡೆಕಲ್ಲನಿಂದ ಚುನಾಯಿತರಾಗಿ ಅಖಂಡ ಕಲಬುರ್ಗಿ ಜಿ.ಪಂ. ನ ಉಪಾಧ್ಯಕ್ಷರನ್ನಾಗಿ ಶಾಸಕ ರಾಜುಗೌಡರು ಆಯ್ಕೆ ಮಾಡಿದ್ದರು. .ಅಂದಿನಿಂದ ರಾಜುಗೌಡರ ಅಚ್ಚುಮೆಚ್ಚಿನವರಾಗಿದ್ದರು. ರಾಜುಗೌಡರು ಹಾಗೂ ಅವರ ಸಹೋದರ ಗದ್ದೆಪ್ಪ ಪೂಜಾರಿ ಅವರನ್ನು ಮನೆಯ ಹಿರಿಯರಿಗೆ ಕೊಡುವ ಗೌರವ ಕೊಡುತ್ತಾ ಇದ್ದರು. ನಿನ್ನೆ ಶನಿವಾರ ಸುರಪುರ ಶಾಸಕ ರಾಜುಗೌಡರ ಸೋಲಿನ ವಿಷಯ ಕೇಳಿ ಆಘಾತಕ್ಕೆ ಒಳಗಾದರು. ತಕ್ಷಣವೇ ಅವರನ್ನು ಬಾಗಲಕೊಟ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತು. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಒಂದುವಾರದೊಳಗೆ ಚೇತರಿಸಿಕೊಳ್ಳಿದ್ದಾರೆ ಎಂದು ಅವರನ್ನು ಇಂದು ಭೇಟಿ ಮಾಡಿದ ಮಾಜಿ ಶಾಸಕ ನರಸಿಂಹನಾಯಕ ಪತ್ರಿಕೆಗೆ ತಿಳಿಸಿದರು.