ರಾಜಕೀಯದಲ್ಲಿ ತಾಳ್ಮೆ ಮುಖ್ಯ

0
23

ಬೆಳಗಾವಿ: ರಾಜಕಾರಣದಲ್ಲಿ ತಾಳ್ಮೆ ಇದ್ದರೆ ಮಾತ್ರ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಸಕ್ತ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಜಾಣ್ಮೆಯಿಂದ ಉತ್ತರ ನೀಡಿದರು, ಮುಖ್ಯಮಂತ್ರಿ ಆಗಬೇಕೆಂದರೆ ಸಮಯ ಕೂಡಿ ಬರಬೇಕು. ಸಮಯ ಕೂಡಿ ಬರಬೇಕಾದರೆ ಕಾಯಬೇಕು. ಯಾವುದೇ ಆಯ್ಕೆ ಇರಲಿ, ಇಲ್ಲದಿರಲಿ ಪಕ್ಷದಲ್ಲಿ ಚರ್ಚೆಯಾದಾಗ ಮಾತ್ರ ರಾಜಕೀಯವಾಗಿ ಬೆಳವಣಿಗೆಗಳು ಆಗುತ್ತವೆ ಎಂದರು.
ಇನ್ನು ಯಾವುದೇ ಸಮಾಜದ ಸ್ವಾಮೀಜಿಗಳಾಗಲಿ ಅವರವರ ಸಮಾಜದ ಬಗ್ಗೆ, ರಾಜಕೀಯವಾಗಿ ಮಾತನಾಡುವುದು ತಪ್ಪಲ್ಲ ಎಂದ ಅವರು, ನಾವೇ ಡಿಸಿಎಂ ಆಗಬೇಕೆಂದು ಎಲ್ಲಿಯೂ ಹೇಳಿಲ್ಲ. ಬೇರೆಯವರು ಮಾತನಾಡಿದರೆ ನಾವೇನೂ ಮಾಡಲಿಕ್ಕಾಗುವುದಿಲ್ಲ ಎಂದರು.

Previous articleಕರ್ನಾಟಕಕ್ಕೆ ೮೦೦೬ ಕೋಟಿ ರೂ. ಅನುದಾನ ಮಂಜೂರು
Next articleಕಿಮ್ಸ್‌ನಲ್ಲಿ ಐವಿಎಫ್, ಕ್ರಿಟಿಕಲ್ ಕೇರ್ ಯುನಿಟ್ ಶೀಘ್ರ ಸ್ಥಾಪನೆ