Home Advertisement
Home ಅಪರಾಧ ಯುವಕನ ಕೊಚ್ಚಿ ಕೊಲೆ

ಯುವಕನ ಕೊಚ್ಚಿ ಕೊಲೆ

0
89

ಬೆಳಗಾವಿ(ಗೋಕಾಕ): ಕಂಪನಿಯೊಂದರ ಕೆಲಸ ಮುಗಿಸಿಕೊಂಡು ವಾಪಸ್ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಸಾವಳಗಿ ಗ್ರಾಮದ ಶಿವಶಂಕರ ಶಿವಪುತ್ರ ಮಗದುಮ್ಮ(35) ಕೊಲೆಗೀಡಾದ ವ್ಯಕ್ತಿ. ತಾಲೂಕಿನ ಶಿವಾಪುರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ಯುವಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಬರುವ ವೇಳೆ ಈ ಘಟನೆ ನಡೆದಿದೆ.
ಕೊಲೆಗಾಗಿ ಮೊದಲೇ ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ರಸ್ತೆ ಬದಿಯಲ್ಲಿ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಬೈಕ್ ಮೇಲೆ ಬರುತ್ತಿದ್ದ ಹಾಗೆ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗೋಪಾಲ್ ರಾಥೋಡ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Previous articleಮಹಿಳೆ ಜೊತೆಗೆ ವಾಗ್ವಾದ: ನಿರ್ವಾಹಕರಿಗೆ ಬಿದ್ದ ಏಟು
Next articleಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ಶಾಸಕ ಸಿ.ವೆಂಕಟೇಶಪ್ಪ ಹೃದಯಾಘಾತದಿಂದ ನಿಧನ