ಬೆಳಗಾವಿ(ಉಗರಗೋಳ): ಯಲ್ಲಮ್ಮನ ಹುಂಡಿಯಲ್ಲಿ ಕಳೆದ ಮೂರು ತಿಂಗಳಲ್ಲಿ ೩.೬೮ ಕೋಟಿ ರೂ. ನಗದು ಕಾಣಿಕೆ ಸಂಗ್ರಹವಾಗಿದೆ.
ಪ್ರತಿಬಾರಿ ಎಣಿಕೆ ನಡೆದಾಗ ರೂ. ೧ ಕೋಟಿಯಿಂದ ರೂ. ೧.೫ ಕೋಟಿಯವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ರೂ. ೪ ಕೋಟಿ ಸಮೀಪದವರೆಗೆ ಸಂಗ್ರಹವಾಗಿದ್ದು ದಾಖಲೆಯಾಗಿದೆ.
೨೦೨೪ರ ಡಿಸೆಂಬರ್ ೧೪ರಿಂದ ೨೦೨೫ರ ಮಾರ್ಚ್ ೧೨ರವರೆಗೆ(೮೯ ದಿನ) ಯಲ್ಲಮ್ಮ ದೇವಸ್ಥಾನ ಮತ್ತು ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾದ ಹಣ ಇದಾಗಿದೆ. ಇದಲ್ಲದೇ, ರೂ. ೨೦.೮೨ ಲಕ್ಷ ಮೌಲ್ಯದ ಚಿನ್ನಾಭರಣ, ರೂ. ೬.೩೯ ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ಸಮರ್ಪಿಸಿದ್ದಾರೆ.
ವಿಶೇಷವೆಂದರೆ ಈ ಹುಂಡಿಯಲ್ಲಿ ಅಮೆರಿಕ, ನೆದರ್ಲ್ಯಾಂಡ್ ಮೊದಲಾದ ದೇಶಗಳ ಕರೆನ್ಸಿಗಳೂ ಪತ್ತೆಯಾಗಿವೆ.