ಉಗರಗೋಳ(ಸವದತ್ತಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಗುರುವಾರ ಪ್ರಖ್ಯಾತ ಕೊಳಲುವಾದಕ ಪಂಡಿತ ಡಾ. ಪ್ರವೀಣ ಗೋಡ್ಖಿಂಡಿ ಕುಟುಂಬ ಸಮೇತ ಭೇಟಿ ನೀಡಿ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನಾಶೀರ್ವಾದ ಪಡೆದುಕೊಂಡರು.
ಯಲ್ಲಮ್ಮಾ ದೇವಿಯ ಸನ್ನಿಧಿಯಲ್ಲಿ ಪ್ರವೀಣ ಗೋಡ್ಖಿಂಡಿ, ಪುತ್ರ ಷಡ್ಜ್, ತಬಲಾ ವಾದಕ ಕಿರಣ ಸುಶ್ರಾವ್ಯವಾಗಿ ಕೊಳಲು ನುಡಿಸಿ ಭಕ್ತರನ್ನು ಹರ್ಷಚಿತ್ತರನ್ನಾಗಿಸಿದರು. ದೇವಸ್ಥಾನ ವತಿಯಿಂದ ಪಂಡಿತ ಡಾ. ಪ್ರವೀಣ ಕುಟುಂಬವನ್ನು ದೇವಸ್ಥಾನ ಅರ್ಚಕರು ಸತ್ಕರಿಸಿದರು.
ರವಿಂದ್ರ ಡಂಬಳ, ವಿ.ಎಂ. ಮೊಕಾಶಿ, ಪ್ರಕಾಶ ಪ್ರಭುನವರ, ಗೋವಿಂದರಾವ್ ಕುಲಕರ್ಣಿ, ಪ್ರಭು ಹಂಜಗಿ, ಆನಂದ ಕುಲಕರ್ಣಿ, ಮೌಳೇಶ ಸುಣಗಾರ, ಸುಮೇರ್ ಶಾಸ್ತಿç, ಆರಾಧನಾ ಕುಲಕರ್ಣಿ, ಉಷಾರಾಣಿ ಪಾಟೀಲ ಹಾಗೂ ಅರ್ಚಕರಾದ ಕೆ.ಎಸ್. ಯಡಿಯೂರಯ್ಯ, ಮಂಜುನಾಥಗೌಡ ಸಂದಿಮನಿ, ಪರಸನಗೌಡ ಕಾಳಿಂಗೌಡ್ರ, ಬಸನಗೌಡ ಶೆಟ್ಟಿನಗೌಡ್ರ, ಅನೀಲ ಗುಡಿಮನಿ ಇತರಿದ್ದರು.


























