ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಛಾಟನೆಯ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ.
ಯತ್ನಾಳ ಉಚ್ಛಾಟನೆಯ ಬಗ್ಗೆ ಬಹಿರಂಗ ಚರ್ಚೆ ನಡೆಸದಂತೆ ಬಿಜೆಪಿ ರಾಷ್ಟ್ರ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಯತ್ನಾಳ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವಲ್ಲಿ ಆಸಕ್ತಿವಹಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡ್, ಯತ್ನಾಳ ಅವರನ್ನು ಪಕ್ಷಕ್ಕೆ ಕರೆತನ್ನಿ ಎಂದು ಸೂಚಿಸಿದರೆ ಅವರ ಜೊತೆಗೆ ಚರ್ಚೆ ಮಾಡಿ ಸ್ವಾಗತ ಕೋರುತ್ತೇವೆ. ನಾನೇ ಸ್ವತಃ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್ಗೆ ಕರೆದುಕೊಂಡು ಬರುತ್ತೇನೆ. ನನಗೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದರು.
ಬೆಲೆ ಏರಿಕೆಯಿಂದ ಜನರಿಗೆ ಹೊರೆ ಆಗುವುದಿಲ್ಲ: ಹಾಲು, ವಿದ್ಯುತ್ ಬೆಲೆ ಏರಿಕೆಯ ಬಗ್ಗೆ ಮಾತನಾಡಿದ ಅವರು, ಜನರಿಗೆ ಅಷ್ಟೇನೂ ಹೊರೆ ಆಗುವುದಿಲ್ಲ. ನಮಗೂ ಇತಿಮಿತಿ ಇದೆ. ಹೀಗಾಗಿ ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದರು.
ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಸದ್ಯದ ವ್ಯವಸ್ಥೆ ಸರಿಪಡಿಸಬೇಕು. ನೋ ಪ್ರಾಫಿಟ್, ನೋ ಲಾಸ್ನಲ್ಲಿ ಸಂಸ್ಥೆ ನಡೆಯಬೇಕು. ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ. ನಮ್ಮ ಯೋಜನೆಗಳನ್ನ ಯಾರು ವಿರೋಧ ಮಾಡುತ್ತಿದ್ದರೋ ಅವರೇ ನಮ್ಮನ್ನ ಕಾಪಿ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಡೆತಡೆ ಸಹಜ ಆದರೆ ಸಿದ್ದರಾಮಯ್ಯ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ. ಹನಿಟ್ರ್ಯಾಪ್ ಅದು ವೈಯಕ್ತಿಕ, ಅದು ಸರ್ಕಾರದ ಯೋಜನೆ ಅಲ್ಲ ಎಂದರು.
























