ಮ್ಯಾಕ್ಸ್‌”ವೆಲ್” ಆಟ: ಆಸ್ಟ್ರೇಲಿಯಾಕ್ಕೆ ಗೆಲುವು

0
10

ಮ್ಯಾಕ್ಸವೆಲ್‌ ಅತ್ಯದ್ಭುತ ಆಟದ ನೆರವಿನಿಂದ ಆಸ್ಟ್ರೇಲಿಯಾ ಅಫ್ಘಾನಿಸಾನ ವಿರುದ್ಧ 3 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ ಕ್ರಿಕೆಟ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 292ರನ್‌ಗಳನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 18.3 ಓವರ್‌ಗಳಲ್ಲಿ ಕೇವಲ 91ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆಗ ಪ್ಯಾಟ ಕಮಿನ್ಸ್‌ ಮತ್ತು ಮ್ಯಾಕ್ಸ್‌ವೆಲ್‌ ಜೋಡಿ ಬರೋಬ್ಬರಿ 202ರನ್‌ಗಳ ಜತೆಯಾಟದೊಂದಿಗೆ ಪಂದ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಗೆಲ್ಲಿಸಿತು. ಮ್ಯಾಕ್ಸ್‌ವೆಲ್‌ ಅಜೇಯ 201(128 ಎಸೆತ, 21 ಬೌಂಡರಿ, 10 ಸಿಕ್ಸರ್‌) ಗಳಿಸಿದರೆ ಪ್ಯಾಟ ಕಮಿನ್ಸ್‌ 68 ಎಸೆತಗಳಲ್ಲಿ 12 ರನ್‌ಗಳಿಸಿ ಉತ್ತಮ ಸಾಥ್‌ ನೀಡಿದರು.

Previous articleಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ
Next articleಸಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರತಿಪಕ್ಷದ ನಾಯಕ ಯಾರು?