ಮೋದಿ ಮೌನವೂ ನಡುಕ ಹುಟ್ಟಿಸುತ್ತದೆ

0
9

ಬೆಂಗಳೂರು: ಮೋದಿ ಅವರ ಮೌನವೂ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಅವರೆಂದರೆ ಎಷ್ಟು ಭಯ ಅಂದರೆ ಮೋದಿ ಅವರ ಧ್ಯಾನವೂ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸುತ್ತದೆ, ಮೋದಿ ಅವರ ಮೌನವೂ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸುತ್ತದೆ. ಕೊನೆಯ ಹಂತದ ಮತದಾನದ ಬಹಿರಂಗ ಪ್ರಚಾರ ಮುಗಿದ ಮೇಲೆ ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲು ಹೋಗಬಾರದಂತೆ, ಹೋದರೂ ಮಾಧ್ಯಮಗಳು ಅದನ್ನ ಪ್ರಸಾರ ಮಾಡಬಾರದಂತೆ. ಕಾಂಗ್ರೆಸ್ ಪಕ್ಷಕ್ಕೆ ಒಂದಂತೂ ಗ್ಯಾರೆಂಟಿ ಆಗಿದೆ. ಜೂನ್ 4 ರಂದು ಹೀನಾಯವಾಗಿ ಸೋಲುವುದು ಗ್ಯಾರೆಂಟಿ ಎಂದು ಪಕ್ಕಾ ಗ್ಯಾರೆಂಟಿ ಆಗಿದೆ ಎಂದಿದ್ದಾರೆ.

Previous articleಸಬ್ ಇನ್ಸಪೆಕ್ಟರ್ ಲೋಕಾಯುಕ್ತರ ಬಲೆಗೆ
Next articleಚಾಲಕರ ಹುದ್ದೆಗೆ ಕನ್ನಡಿಗರು ಸಿದ್ಧರಿರಲಿಲ್ಲವೇ?