ಮೋದಿ ನೋಡಿ ಜನ ಮತ ಹಾಕಬಾರದು

0
13

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೋಡಿ ಬಿಜೆಪಿಗೆ ಮತ ಹಾಕಿ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಮೋದಿ ನೋಡಿದರೆ ಮತ ಹಾಕಬಾರದು. ಏಕೆಂದರೆ ಅವರು ಏನು ಮಾಡಿದ್ದಾರೆಂದು ಜನರು ಮತ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಲ್ವಾಮಾ ದಾಳಿಗೆ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದಾಗಿ ಹೇಳಿ ಐದು ವರ್ಷ ಕಳೆಯಿತು. ಆದರೆ ಏನಾಗಿದೆ?. ತಮ್ಮ ಆಡಳಿತದಲ್ಲಿ ಏನಾಗಿದೆ ಎಂದು ದೇಶದ ಜನರಿಗೆ ಉತ್ತರ ಕೊಡಬೇಕಲ್ಲವೆ?. ಯಾರು ದಾಳಿ ಮಾಡಿದರು. ಯಾರಿಗೆ ಶಿಕ್ಷೆ ಆಗಿದೆ ಎಂದು ಪ್ರಶ್ನಿಸಿ, ಆರ್ಥಿಕ ಪರಿಸ್ಥಿತಿ ಕುಸಿದಿದೆ. ೧೬೮ ಲಕ್ಷ ಕೋಟಿ ರೂ. ಸಾಲ ಆಗಿದೆ. ಶೇ. ೮೩ ರಷ್ಟು ನಿರುದ್ಯೋಗ ಇದೆ. ಈ ಬಗ್ಗೆ ಮಾತನಾಡಿದರೆ ಬಿಜೆಪಿಗರ ಮನಸ್ಸಿಗೆ ನೋವಾಗುತ್ತದೆ. ಯಾವೊಂದು ಅಭಿವೃದ್ಧಿ ಕೆಲಸ ಮಾಡದೇ ಮತ ಕೇಳಲು ರಾಜ್ಯಕ್ಕೆ ಬರಲು ನಾಚಿಕೆ ಆಗಲ್ವಾ. ಆದರೂ ಮೋದಿ ನೋಡಿ ಮತ ಹಾಕಿ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.

Previous articleಯುಗಾದಿ, ಈದ್ ಪ್ರಯುಕ್ತ ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಚಿತ್ರದ ಟೈಟಲ್ ಟೀಸರ್ ಮತ್ತು ಫಸ್ಟ್ ಲುಕ್ ರಿಲೀಸ್
Next article`ಮೋದಿ ಸೋಲಿಸಲು ಶತ್ರು ರಾಷ್ಟ್ರಗಳ ಬೆಂಬಲ’