ಮೈತ್ರಿ ವಿಚಾರ ಮರುಪರಿಶೀಲನೆ ಮಾಡಿ ಎಂದು ಮತ್ತೊಮ್ಮೆ ಕೈಮುಗಿದು ಬೇಡುತ್ತೇನೆ

0
17
ಇಬ್ರಾಹಿಂ

ಬೆಂಗಳೂರು: ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಮರುಪರಿಶೀಲನೆ ಮಾಡಿ ಎಂದು ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರಿಗೆ ಮತ್ತೊಮ್ಮೆ ಕೈಮುಗಿದು ಬೇಡುತ್ತೇನೆ ಎಂದು ಮಾಜಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಕ್ತಿಗತವಾಗಿ ಯಾವುದೇ ಭಿನ್ನಮತವಿಲ್ಲ, ಸೈದ್ಧಾಂತಿಕವಾಗಿ ವಿರೋಧವಿದೆ. ಮೈತ್ರಿ ವಿಚಾರವನ್ನು ಮರುಪರಿಶೀಲನೆ ಮಾಡಿ ಎಂದರು.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಸರ್ಜನೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಟೆಕ್ನಿಕಲಿ ಹಾಗೂ ಮೆಂಟಲಿ ಎರಡೂ 100% ಜೆಡಿಎಸ್‌ನಲ್ಲಿ ಇದ್ದೇನೆ. ನಾನೇ ಅಧ್ಯಕ್ಷ ಅಂತ ಹೇಳಿದ್ದೇನೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯೋಕೆ ಆಗಲ್ಲ
ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷರಿಗೆ ಅಧಿಕಾರ ಇರುತ್ತೆ. ರಾಜ್ಯಾಧ್ಯಕ್ಷರು‌ ಸಂವಿಧಾನ ವಿರೋಧವಾಗಿ ಹೋದರೇ, 2/3 ಬಹುಮತ ಸದಸ್ಯರಿಂದ ನೋಟಿಸ್ ಕೊಡಬೇಕು. ಮೀಟಿಂಗ್ ಕರೆದು ಆ ಸಭೆಯಲ್ಲಿ ರಾಜ್ಯಾಧ್ಯಕ್ಷರನ್ನು ತೆಗೆಯಬೇಕಾಗುತ್ತೆ. ವಿಜಯದಶಮಿವರೆಗೂ ವರಿಷ್ಠರು ಏನಾದರೂ ತೀರ್ಮಾನ ಮಾಡುತ್ತಾರಾ ನೋಡೋಣ. ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ ಎಂದರು.

Previous articleಮಾಜಿ ಸಿಎಂಗೆ ಯಶಸ್ವಿ ಬೈಪಾಸ್‌ ಶಸ್ತ್ರಚಿಕಿತ್ಸೆ: ಆರೋಗ್ಯದಲ್ಲಿ ಚೇತರಿಕೆ
Next articleಸಚಿವ ಸ್ಥಾನ ಕೊಡೋದು ಬಿಡೋದು ಅವರಿಗೆ ಸೇರಿದ್ದು