ಮೆಸ್ಕಾಂ ಇಂಜಿನಿಯರ್ ಲೋಕಾ ಬಲೆಗೆ

0
113

ಅಜ್ಜಂಪುರ: ಇಲ್ಲಿನ ಸಮೀಪದ ಶಿವನಿ ಮೆಸ್ಕಾಂನ ಪ್ರಭಾರ ಸಹಾಯಕ ಇಂಜಿನಿಯರ್ ಕುಮಾರ್ ಅವರ ಮೇಲೆ ಸೋಮವಾರ ಲೋಕಾಯುಕ್ತ ದಾಳಿಯಾಗಿದೆ. ಮೆಸ್ಕಾಂ ಗುತ್ತಿಗೆದಾರ ಆನಂದ್ ಅವರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಎರಡು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ ೨೦,೦೦೦ ರೂ. ತೆಗೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಎಇಇ ಅವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Previous articleಉಗ್ರರು ಎಚ್ಚರವಾಗಿದ್ದಾಗ ಬಿಜೆಪಿ ಮಲಗಿರುತ್ತದೆ..!
Next articleಭಯೋತ್ಪಾದಕ ದಾಳಿ, ಕೇಂದ್ರದ ನಿರ್ಧಾರಕ್ಕೆ ಬದ್ಧ