ಮೆಕ್ಯಾನಿಕ್‌ಗೆ ಒಲಿದ ೨೫ ಕೋಟಿ ಲಾಟರಿ

0
14

ಮಂಡ್ಯ: ಪಾಂಡವಪುರ ಪಟ್ಟಣದ ಬೈಕ್ ಮೆಕ್ಯಾನಿಕ್ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ ೨೫ ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಪರಿಚಯಸ್ಥರ ಮೂಲಕ ಖರೀದಿಸಿದ್ದ ಟಿಕೆಟ್ ಇವರ ಬದುಕನ್ನೇ ಬದಲಿಸಿದೆ.
ಅಲ್ತಾಫ್ ಪಾಷಾ, ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ, ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದಾರೆ. ಮೊನ್ನೆ ಪರಿಚಯಸ್ಥರ ಮೂಲಕ ಕೇರಳ ರಾಜ್ಯದ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅವರು ೨೫ ಕೋಟಿ ರೂ. ಬಹುಮಾನ ಗೆದಿದ್ದಾರೆ. ಇನ್ನು ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಪ್ರಯಾಣ ಮಾಡಿದ್ದು, ಲಾಟರಿ ಹಣ ಪಡೆಯುವ ಪ್ರಕ್ರಿಯೆಯನ್ನು ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.
ಈ ವರ್ಷದ ತಿರುವೋಣಂ ಬಂಪರ್ ಡ್ರಾ. ನಡೆಯಿತು. ೭೧ ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ ೨೫ ಕೋಟಿ ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆ ಮನೆ ಮಾಡಿತ್ತು. ಅದು ಕರ್ನಾಟಕದ ಪಾಂಡವಪುರ ಮೂಲದ ಅಲ್ತಾಫ್ ಎಂಬುವವರ ಪಾಲಾಗಿದೆ. ೨೫ ಕೋಟಿ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಓಣಂ ಬಂಪರ್ ವಿಷಯದಲ್ಲಿ ೨೫ ಕೋಟಿಯಲ್ಲಿ ೧೨ ಕೋಟಿ ರೂ. ಮಾತ್ರ ಲಾಟರಿ ಟಿಕೆಟ್ ಹರಿದ ಅದೃಷ್ಟವಂತರಿಗೆ ಸಿಗುತ್ತದೆ.

Previous articleಪ್ರೀತಿಯ ಶ್ವಾನಕ್ಕಾಗಿ ಮಾತು ತಪ್ಪಿದ್ದ ಟಾಟಾ
Next articleದೀಪಾವಳಿ ಹಬ್ಬಕ್ಕೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ