ಮೂವರು ನೀರಿನಲ್ಲಿ ನಿಗೂಢ ನಾಪತ್ತೆ

0
108

ಔರಾದ: ತಾಲ್ಲೂಕಿನ ಹೆಗಡಾಪುರ ಗ್ರಾಮದ ಬಳಿಯ ಸೇತುವೆ ದಾಟುವಾಗ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಕಾಣೆಯಾಗಿದ್ದು, ಪತಿ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಆಗಿದ್ದಾನೆ. ಸುನಂದಾ(48), ಆಕೆಯ ಮಕ್ಕಳು ಐಶ್ವರ್ಯ(16) ಮತ್ತು ಸುಮೀತ್(10) ಕಾಣೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ. ಹೊಲದಲ್ಲಿ ಕೆಲಸ ಮಾಡಿ ಮನೆಗೆ ಹಿಂತಿರುಗುತ್ತಿದ್ದು, ಸೇತುವೆಯನ್ನು ದಾಟುವಾಗ ಮಳೆಗೆ ಸಿಲುಕಿ ಈ ಅವಾಂತರ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗುವ ತನಕ ವಿರಮಿಸುವುದಿಲ್ಲ
Next articleಹಾರೂಗೇರಿಯಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ರೋಡ್ ಶೋ