ಮೂರನೇ ಅವಧಿಯ ಮೊದಲ ದಿನ: ಅನ್ನದಾತರಿಗೆ ಕಿಸಾನ್ ಸಮ್ಮಾನ

0
9

ಪ್ರಧಾನಿಯಾದ ಮೊದಲ ದಿನವೇ ರೈತರಿಗೆ ಮೋದಿ ಬಂಪರ್‌, ರೈತ ಸಮ್ಮಾನ್‌ ನಿಧಿಯ 20 ಸಾವಿರ ಕೋಟಿ ರಿಲೀಸ್‌

ಬೆಂಗಳೂರು: ಮೊದಲ ದಿನವೆ ಅನ್ನದಾತರಿಗೆ ಕಿಸಾನ್ ಸಮ್ಮಾನ ಎಂದು ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ತಮ್ಮ ಮೂರನೆ ಅವಧಿಯ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲನೆಯದಾಗಿ ಕಿಸಾನ್ ಸಮ್ಮಾನ್ ಯೋಜನೆಯಡಿ 9.3 ಕೋಟಿ ರೈತರಿಗೆ ಒಟ್ಟು 20,000 ಕೋಟಿ ರೂಪಾಯಿ ಮೊತ್ತದ ಹಣ ಬಿಡುಗಡೆ ಮಾಡುವ ಕಡತಕ್ಕೆ ಸಹಿ ಹಾಕಿದ್ದಾರೆ. ಕರ್ನಾಟಕದ ಸಮಸ್ತ ರೈತರ ಪರವಾಗಿ ತಮಗೆ ಧನ್ಯವಾದಗಳು ಮೋದಿಜಿ ಎಂದಿದ್ದಾರೆ.

Previous articleಪ್ರಜ್ವಲ್ ಎಸ್‍ಐಟಿ ಕಸ್ಟಡಿ ಅಂತ್ಯ
Next articleನೀವು ಹೂಗಳಿಗಿಂತ ಮುಳ್ಳುಗಳನ್ನೇ ಬಹಳ ಬೆಳೆಸಿದ್ದೀರಿ…