ಮುಸ್ಲಿಂ ಉಗ್ರವಾದಿತ್ವವನ್ನು ಸಂಹಾರ ಮಾಡುವ ಸಮಯ ಬಂದಿದೆ

0
20

ದೇಶದ ಹೊರಗಿನ ಮತ್ತು ದೇಶದೊಳಗಿನ ಉಗ್ರರನ್ನು ಸಂಹರಿಸುವ ಸಮಯ ಬಂದಿದೆ. ಕಾಶ್ಮೀರದ ಪಹಲ್ಲಾಂನಲ್ಲಿ ನಡೆದ ಉಗ್ರರ ದಾಳಿ ಮಾನವೀಯತೆಗೊಂದು ಸವಾಲು.ಇಂತಹ ನೀಚರು ಬದುಕುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

ಪ್ರವಾಸಕ್ಕೆಂದು ಕುಟುಂಬ ಸಹಿತವಾಗಿ ಬಂದ ಅಮಾಯಕರನ್ನು ಎಕೆ 47 ಹಿಡಿದು ದಾಳಿಗೆ ಬಂದ ಮುಸ್ಲಿಂ ಉಗ್ರರು ರಾಕ್ಷಸರಂತೆ ನರಮೇಧ ನಡೆಸಿದ್ದಾರೆ. ಧರ್ಮಾಧಾರಿತವಾಗಿ ಮುಸ್ಲಿಂ ಉಗ್ರರು ಹಿಂದೂ ಸಮಾಜವನ್ನೇ ಗುರಿಯಾಗಿಸಿದ್ದಾರೆ. ಉಗ್ರರಿಗೆ ಜಾತಿಯಿಲ್ಲ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್‌ಗೆ ಉಗ್ರರೇ ನಮ್ಮ ಜಾತಿಯಿದೆ ಎಂದು ತೋರಿಸಿ ಹಿಂದೂಗಳನ್ನೇ ಹತ್ಯೆ ಮಾಡಿದ್ದಾರೆ. ಕಾಶ್ಮೀರ ಫೈಲ್ಸ್ ಸತ್ಯ ಎಂಬುದು ಈ ಘಟನೆಯಿಂದ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ.

ದೇಶದಲ್ಲಿನ ಸನಾತನ ಪರಂಪರೆಯಂತೆ ಜೀವನ ನಡೆಸುವ ಜನತೆ ವಿವಿಧ ಪಂಗಡ, ಪಕ್ಷಬೇದ ಬದಿಗೊತ್ತಿ, ಹಿಂದೂ ಸಮಾಜದಡಿ ಒಟ್ಟಾಗಿ ನಿಲ್ಲುವ ಮೂಲಕ ಮುಸ್ಲಿಂ ಉಗ್ರವಾದ ನಿರ್ಮೂಲನ ಮಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ನಿರಪರಾಧಿ ಪ್ರಜೆಗಳು ಉಗ್ರ ಕೃತ್ಯಕ್ಕೆ ಸಾವನ್ನಪ್ಪಿದ್ದು ಸಂತಾಪ ಸೂಚಿಸುವ ಜತೆಗೆ ಅವರ ಕುಟುಂಬಗಳಿಗೆ ಕಷ್ಟಸಹಿಸುವ ಶಕ್ತಿ ದೇವರು ನೀಡಲಿ ಗಾಯಾಳುಗಳು ಚೇತರಿಸಿಕೊಳ್ಳುವಂತಾಗಲಿ ಎಂದಿದ್ದಾರೆ.

Previous articleಕೇಂದ್ರ ಸರ್ಕಾರದ ವೈಫಲ್ಯದಿಂದ ದಾಳಿ
Next articleವಿವಿಧೆಡೆ ಉಪ ಲೋಕಾಯುಕ್ತರ ಭೇಟಿ, ಪರಿಶೀಲನೆ