Home ತಾಜಾ ಸುದ್ದಿ ಮುನಿರತ್ನಗೆ ನಾವೇನೂ ನಿಂದಿಸುವಂತೆ ಹೇಳಿಲ್ಲ

ಮುನಿರತ್ನಗೆ ನಾವೇನೂ ನಿಂದಿಸುವಂತೆ ಹೇಳಿಲ್ಲ

0
162

ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಬೈಯ್ಯುವಂತೆ, ಸಿಕ್ಕ ಸಿಕ್ಕ ಹಾಗೆ, ಬಾಯಿಗೆ ಬಂದಂತೆ ಮಾತಾಡುವಂತೆ ನಾವೇನು ಹೇಳಿಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಮುನಿರತ್ನ ಅವರನ್ನು ರಾಜಕೀಯ ದ್ವೇಷದಿಂದ ಬಂಧಿಸಿಲ್ಲ. ನಾವೇನೂ ಅವರಿಗೆ ಬೈಯ್ಯುವಂತೆ ಹೇಳಿಲ್ಲವಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಶಾಸಕ ಮುನಿರತ್ನ ಅವರಿಗೆ ಕಾಂಗ್ರೆಸ್‌ನವರು ಅಥವಾ ಬಿಜೆಪಿ, ಜೆಡಿಎಸ್‌ನವರು ಬೈಯ್ಯುವಂತೆ ಹೇಳಿದ್ದಾರಾ.? ತರಾತುರಿಯಲ್ಲಿ ಅವರನ್ನು ಬಂಧಿಸಿಲ್ಲ. ಅವರ ಆರೋಪಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.