Home Advertisement
Home ನಮ್ಮ ಜಿಲ್ಲೆ ಉಡುಪಿ ಮುತಾಲಿಕ್ ಸ್ಪರ್ಧೆಗೆ ಸ್ವಕೀಯರಿಂದಲೇ ವಿರೋಧ

ಮುತಾಲಿಕ್ ಸ್ಪರ್ಧೆಗೆ ಸ್ವಕೀಯರಿಂದಲೇ ವಿರೋಧ

0
90

ಉಡುಪಿ: ಮುಂದಿನ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪರ್ಧಿಸಲು ನಿರ್ಧರಿಸಿದ್ದು, ಅವರ ಸ್ಪರ್ಧೆಗೆ ಸ್ವಕೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಶ್ರೀರಾಮ ಸೇನೆ ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ ಭಟ್ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಮೋದ್ ಸ್ಪರ್ಧೆಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದರು.
ಪ್ರಮೋದ್ ಮುತಾಲಿಕ್ ಅವರು ಕಾರ್ಕಳದ ಉದ್ಯಮಿ ಹಾಗೂ ವಕೀಲರೋರ್ವರ ಒತ್ತಾಸೆ ಮೇರೆಗೆ ಸ್ಪರ್ಧಿಸುತ್ತಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರೆದುರು ಮುತಾಲಿಕ್ ಸೋಲು ಖಚಿತ.
ಅಷ್ಟಕ್ಕೂ ಮುತಾಲಿಕ್ ಸ್ಪರ್ಧಿಸಿದಲ್ಲಿ ಅದು ಕಾಂಗ್ರೆಸ್‌ಗೆ ಲಾಭವಾಗಲಿದೆ. ಹಾಗಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಇನ್ನೂ ಕಾಲ ಮಿಂಚಿಲ್ಲ ಎಂದರು.

Previous articleಕುಮಾರಸ್ವಾಮಿಯವರಿಂದ ವಿಷ ಬೀಜ ಬಿತ್ತುವ ಕೆಲಸ
Next articleಮುಂಬೈ: ಅರೇಬಿಕ್ ಅಕಾಡೆಮಿ ಉದ್ಧಾಟಿಸಿದ ಮೋದಿ